ದಿನದ ಸುದ್ದಿ

ದಾವಣಗೆರೆ | ಜಿಲ್ಲೆಯಲ್ಲಿ ಇಂದು 107 ಕೊರೋನಾ ಪಾಸಿಟಿವ್, 02 ಸಾವು, ಒಟ್ಟು1178 ಪ್ರಕರಣಗಳು

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಇಂದು 107, ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಹಾಗೂ 26 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆsಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ. ಮತ್ತು 02 ಸಾವು ಸಂಭವಿಸಿದೆ.

ಈ ದಿನ ಕೋವಿಡ್-19 ದೃಢಪಟ್ಟ ಪ್ರಕರಣಗಳು ದಾವಣಗೆರೆಯಲ್ಲಿ 64, ಹರಿಹರದಲ್ಲಿ 26, ಜಗಳೂರಿನಲ್ಲಿ 06, ಚನ್ನಗಿರಿಯಲ್ಲಿ 01, ಹೊನ್ನಾಳಿಯಲ್ಲಿ 02 ಪ್ರಕರಣಗಳು ಹಾಗೂ ಅಂತರ್‍ಜಿಲ್ಲೆಯಿಂದ 08 ಕೋವಿಡ್-19 ಪ್ರಕರಣಗಳು ಇಂದು ವರದಿಯಾಗಿದೆ.

ಇಂದು ತಾಲ್ಲೂಕುವಾರು ಬಿಡುಗಡೆಯಾದವರು ದಾವಣಗೆರೆಯಿಂದ 13, ಹರಿಹರದಿಂದ 10, ಜಗಳೂರಿನಿಂದ 01, ಹೊನ್ನಾಳಿಯಿಂದ 01, ಅಂತರ್‍ಜಿಲ್ಲೆಯಿಂದ 01, ಒಟ್ಟು 26 ಮಂದಿ ಇವರು ಸಂಪೂರ್ಣ ಗುಣಮುಖರಾಗಿ ಜು.23 ರಂದು ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ದಿನ ಮರಣ ಹೊಂದಿದವರು ಡಿ.ವಿ.ಜಿ 513, ಮತ್ತು 881 ಈ ಇಬ್ಬರು ವ್ಯಕ್ತಿಗಳು ಜು. 21 ರಂದು ಮರಣ ಹೊಂದಿದ್ದಾರೆ.

ಒಟ್ಟು 1178 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 667 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಹಾಗೂ 32 ಸಾವು ಸಂಭವಿಸಿದ್ದು. ಪ್ರಸುತ್ತ 479 ಪ್ರಸುತ್ತ ಪ್ರಕರಣಗಳು ಇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version