ದಿನದ ಸುದ್ದಿ
ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ : ಗಂಟಲು ದ್ರವ ಪರೀಕ್ಷೆಗೆ 2600ರೂ, ಹಾಗೂ ಇನ್ನಿತರೆ ಚಿಕಿತ್ಸೆಯ ದರ ಪಟ್ಟಿ ಇಲ್ಲಿದೆ ಓದಿ..!
ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ದರ ನಿಗದಿಪಡಿಸಿದೆ.
ಗಂಟಲು ದ್ರವ ಪರೀಕ್ಷೆಗೆ 2600ರೂ, ಒಂದು ದಿನದ ಜನರಲ್ ವಾರ್ಡ್ ಗೆ 5200ರೂ, ಜನರಲ್ ವಾರ್ಡ್ ಜೊತೆಗೆ ಆಕ್ಸಿಜನ್ 7500ರೂ, ಐಸೋಲೇಷನ್ ವಾರ್ಡ್ ಗೆ 8500ರೂ, ವೆಂಟಿಲೇಟರ್ ಒಳಗೊಂಡ ಐಸಿಯು ವಾರ್ಡ್ ಗೆ 12000ರೂ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243