ದಿನದ ಸುದ್ದಿ

ದಾವಣಗೆರೆ | ಈವರೆಗೆ ಕೋವಿಡ್ ಟೆಸ್ಟ್ ಗೆ ಒಳಪಟ್ಟವರು ಎಷ್ಟು ಜನ ಗೊತ್ತಾ..? ಓದಿ ಈ‌ ಸುದ್ದಿ‌

Published

on

ಸುದ್ದಿದಿನ, ದಾವಣಗೆರೆ : ಜಾಲಿನಗರ ಒಟ್ಟು 127 ರಲ್ಲಿ 97 ರೋಗಿಗಳು ಗುಣಮುಖರಾಗಿದ್ದು, ಇನ್ನು 9 ಕೆಸ್‍ಗಳು ಮಾತ್ರ ಬಾಕಿ ಉಳಿದಿವೆ. ಜಿಲ್ಲೆಯಲ್ಲಿ ಕೋವಿಡ್ 19 ಲ್ಯಾಬ್ ಉದ್ಘಾಟನೆಯಾಗಿದೆ. ಒಟ್ಟು ನಾವು ಈವರೆಗೆ 12.116 ಮಂದಿಯನ್ನು ಟೆಸ್ಟ್ಗೆ ಒಳಪಡಿಸಿದ್ದೇವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ರಾಘವನ್ ತಿಳಿಸಿದರು.

ಸೋಮವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಯೋಜಿಸಲಾಗಿದ್ದ ಕೋವಿಡ್-19 ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು‌.

ತಲೆ ನೋವು, ಜ್ವರ ಮತ್ತು ಕೆಮ್ಮಿನ ಲಕ್ಷಣಗಳಿರುವವರು ಒಟ್ಟು 6.000 ಮಂದಿ ಟೆಸ್ಟಗೆ ಒಳಪಡಿಸಿದ್ದೇವೆ. ಒಟ್ಟು ಈಗ 36 ಸಕ್ರಿಯ ಕೇಸ್‍ಗಳು ಇವೆ. ಅದರಲ್ಲಿ 90 ವರ್ಷದ ವೃದ್ದರೊಬ್ಬರಿಗೆ ಸೋಂಕು ತಗುಲಿದ್ದು, ಅವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಲಾಗುತ್ತದೆ ಎಂದರು.

ಭಾನುವಾರ ಬಸವರಾಜ ಪೇಟೆ ಒರ್ವ ವ್ಯಕ್ತಿಗೆ ಕೊರೊನಾ ಸೋಂಕು ಕಂಡು ಬಂದಿದ್ದು,ಅವರ ಕುಂಟುಬದ 16 ಮಂದಿ ಕ್ವಾರಂಟೈನ್‍ಗೆ ಒಳಪಡಿಸಿದ್ದು, ಯಾರಿಗೂ ಸಹ ಸೋಂಕು ಕಂಡು ಬಂದಿಲ್ಲ ಎಂದು ಮಾಹಿತಿ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version