ದಿನದ ಸುದ್ದಿ
ಚನ್ನಗಿರಿ | ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೋವಿಡ್ ಲಸಿಕಾಕರಣ ಕಾರ್ಯಕ್ರಮ
ಸುದ್ದಿದಿನ, ಚನ್ನಗಿರಿ : ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋವ್ಯಾಕ್ಸಿನ್/ಕೋವಿಶಿಲ್ ಕೋರ್ಬಿವ್ಯಾಕ್ಸ್ ಡೋಸ್‌ಗಳ ಲಸಿಕಕಾರಣವನ್ನು ( Covaxin vaccine ) ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ನೀಡುವ ಲಸಿಕಾಕರಣ (vaccination) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಥಮ ಡೋಸ್ ತೆಗೆದುಕೊಂಡವರು ದ್ವಿತೀಯ ಡೋಸ್ ಪಡೆದರು. ದ್ವಿತೀಯ ಡೋಸ್ ಪಡೆದವರು ತೃತೀಯ ಡೋಸ್ ಪಡೆದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243