ದಿನದ ಸುದ್ದಿ
ಕೊರೋನಾ ಸುಳಿಯದ ನಮ್ಮ ರಾಜ್ಯದ ಜಿಲ್ಲೆಯಿದು..!
ಸುದ್ದಿದಿನ,ಚಾಮರಾಜನಗರ: ಕೊರೊನಾ ಸೋಂಕು ಇರುವ ತಮಿಳುನಾಡು, ಕೇರಳ ಹಾಗೂ ರಾಜ್ಯದ ಮೈಸೂರು, ಮಂಡ್ಯ ಜಿಲ್ಲೆಯ ಗಡಿಗಳನ್ನು ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ ಕಳೆದ 60 ದಿನಗಳಿಂದ ಒಂದೂ ಪ್ರಕರಣ ದಾಖಲಾಗದೇ ಚಾಮರಾಜನಗರ ಹಸಿರು ವಲಯದಲ್ಲೇ ಮುಂದುವರೆದು ಅಚ್ಚರಿ ಮೂಡಿಸಿದೆ.
ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೊರೊನಾ ವ್ಯಾಪಿಸಿದ್ದು, ಕೊರೊನಾ ಕಾಣಿಸಿಕೊಳ್ಳದ ಏಕಮಾತ್ರ ಜಿಲ್ಲೆಯಾಗಿ ಗಡಿಜಿಲ್ಲೆ ಚಾಮರಾಜನಗರ ಉಳಿದುಕೊಂಡಿದೆ. ಕೊರೊನಾ ಸೋಂಕು ಹೆಚ್ಚಿರುವ ತಮಿಳುನಾಡು, ಕೇರಳ ಮತ್ತು ರಾಜ್ಯದ ಮೈಸೂರು, ಮಂಡ್ಯ ಜಿಲ್ಲೆಯ ಗಡಿಗಳನ್ನು ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ ಕಳೆದ 60 ದಿನಗಳಲ್ಲಿ ಒಂದೂ ಪ್ರಕರಣ ದಾಖಲಾಗದೆ ಹಸಿರು ವಲಯದಲ್ಲೇ ಮುಂದುವರಿದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243