ದಿನದ ಸುದ್ದಿ

ಡಿಯರ್ ಮೀಡಿಯಾ ದ ‘ಹಸ್ತಮೈಥುನ’

Published

on

  • ರಾಜಾರಾಮ್ ತಲ್ಲೂರ್

ವತ್ತು ಎರಡು-ಮೂರು ಕನ್ನಡ ಪತ್ರಿಕೆಗಳು ತಮ್ಮ ಸಾಹಸವನ್ನು ತಾವೇ ವರ್ಣಿಸಿಕೊಂಡು, ತಮಗೆ ತಾವೇ ಥ್ಯಾಂಕ್ಸ್ ಕೊಟ್ಟುಕೊಂಡು ಮುಖಪುಟದಲ್ಲಿ ಪ್ರಕಟಿಸಿಕೊಂಡಿವೆ.

ನಿನ್ನೆ “ಸೋಷಿಯಲ್ ಡಿಸ್ಟೆನ್ಸಿಂಗ್” ಬೇಕು ಅಂತ ಸರ್ಕಾರದ ಕರೆಗೆ ಪ್ರತಿಕ್ರಿಯೆ ಆಗಿ ಬೆಳಗ್ಗೆ 7.00ರಿಂದ ರಾತ್ರಿ9.00 ತನಕ “ಜನತಾ ಕರ್ಫ್ಯೂ” ನಡೆದಿತ್ತು. ಯಾವತ್ತಿನಂತೆ ಬೆಳಗಿನ ಜಾವ ಪತ್ರಿಕೆಗಳು ಮನೆಗೆ ಬಂದಿವೆ. ಅದರಲ್ಲೇನು ಹೊಸದೂ ಇಲ್ಲ; ವಿಶೇಷ ಸಾಹಸವೂ ಇಲ್ಲ.

ಆದರೆ ನಮ್ಮ ಕೆಲವು ಪತ್ರಿಕೆಗಳಿಗೆ ಇದು ಮಹಾ ಸಾಹಸವಾಗಿ ಕಂಡಿದೆ. ಏಜಂಟರ ಫೋಟೋ ಗಳು ಪ್ರಕಟವಾಗಿವೆ. ಆ ಏಜಂಟರೇ ಪೇಪರ್ ಹಾಕುವ ಹುಡುಗರೋ ಎಂಬುದು ಇನ್ನೊಂದು ಪ್ರಶ್ನೆ.

ಇನ್ನೂ ಕೊರೋನಾ ವಿರುದ್ಧ ಯುದ್ಧ ಆರಂಭ ಆಗುತ್ತಿದೆಯಷ್ಟೇ. ಇವರು ಈಗಲೇ ಕಾಲಡಿ ಹುಲಿಯ ಹೆಣ ಇರಿಸಿಕೊಂಡು ಗನ್ ಹೆಗಲಿಗೇರಿಸಿ ಫೋಟೋ ಪೋಸ್ ಕೊಡುವ ಕೆಲಸಕ್ಕೆ ಹೊರಟಿದ್ದಾರೆ. ಇಂತಹ ಉನ್ಮಾದಗಳದೇ “ಟ್ರೇಲರ್” ನಿನ್ನೆ ಸಂಜೆ ಕಂಡುಬಂದದ್ದು. ಹೆಚ್ಚಿನ ಪತ್ರಿಕೆಗಳು ಜನ ಗುಂಪುಗುಂಪಾಗಿ, ಸೋಷಿಯಲ್ ಡಿಸ್ಟೆನ್ಸಿಂಗ್ ಆದೇಶ ಉಲ್ಲಂಘಿಸುತ್ತಿರುವ ಚಿತ್ರಗಳನ್ನು ಹಾಕಿ ಅದನ್ನೂ ಸಂಭ್ರಮಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿಯ ಕೆಲಸ ಇದು.

ಮಾಡುವ ಕೆಲಸಕ್ಕೂ – ಉದ್ದೇಶಕ್ಕೂ ಸಂಬಂಧಗಳನ್ನೇ ಕಡಿದುಹಾಕುವ ಇಂತಹ ಜನಗಳು ಸುದ್ದಿಮನೆಗಳಲ್ಲಿ ತುಂಬಿಕೊಂಡಿದ್ದಾರೆ ಎಂಬುದೇ ಭಯ ಹುಟ್ಟಿಸುತದೆ. ನಾಳೆ ದುರದೃಷ್ಟವಶಾತ್ ಪರಿಸ್ಥಿತಿ ಹದಗೆಟ್ಟರೆ ಇಂತಹ ಮಹಾನುಭಾವರಿಂದ ಏನು ನಿರೀಕ್ಷಿಸುತ್ತೀರಿ?

ನಮ್ಮ ಊರಬಾಗಿಲಿಗೆ ಬಂದು ನಿಂತಿರುವ ಮಹಾಮಾರಿ ಎಷ್ಟು ದೊಡ್ಡದು ಮತ್ತು ನಮ್ಮ ತಯಾರಿ ಎಷ್ಟಿದೆ ಎಂಬುದನ್ನು ಅಂದಾಜಿಸಿಕೊಳ್ಳುವುದಕ್ಕೆ, ಈ 30ನಿಮಿಷಗಳ ಚೀನಾದ ವುಹಾನ್ ನಗರದ ಡಾಕ್ಯುಮೆಂಟರಿಯನ್ನು ದಯವಿಟ್ಟು ನೋಡಿ. ಎಲ್ಲಿ ತಯಾರಿಗಳು ಆಗಬೇಕಿವೆಯೋ ಅಲ್ಲಿ ಸರಕಾರವನ್ನು, ಜನರನ್ನು ಎಚ್ಚರಿಸುವ ಕೆಲಸ ಶುರುಹಚ್ಚಿಕೊಳ್ಳಿ. ನಿಮಗೆ ಒಳ್ಳೆಯ ಬುದ್ಧಿ ಶೀಘ್ರ ಬರಲೆಂದು ಪ್ರಾರ್ಥಿಸುತ್ತೇನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version