ದಿನದ ಸುದ್ದಿ
ದಾವಣಗೆರೆ ವೈದ್ಯರ ಲೋಕ, ಇಲ್ಲಿ ಲೋಪವಾಗಬಾರದು : ಜಿಲ್ಲಾಧಿಕಾರಿ
ಸುದ್ದಿದಿನ,ದಾವಣಗೆರೆ :ದಾವಣಗೆರೆ ವೈದ್ಯರ ಲೋಕ. ನಮ್ಮಲ್ಲಿ ಮೂರು ಕೋವಿಡ್ ಲ್ಯಾಬ್, ಎರಡು ಮೆಡಿಕಲ್ ಕಾಲೇಜು, ಅತ್ಯುತ್ತಮ ತಜ್ಞ ವೈದ್ಯರು ಇದ್ದಾರೆ. ಇದುವರೆಗೆ 179 ಪ್ರಕರಣಗಳ ಪೈಕಿ ಇಂದು 06 ಬಿಡುಗಡೆ ಸೇರಿದಂತೆ 147 ಜನರು ಬಿಡುಗಡೆ ಹೊಂದಿದ್ದಾರೆ. 8 ತಿಂಗಳ ಮಗುವೂ ಸೇರಿದಂತೆ ಅನೇಕ ಹಿರಿಯರು ಚೇತರಿಸಿಕೊಂಡು ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪ್ರಸ್ತುತ 2.5 ತಿಂಗಳ ಮಗುವಿಗೂ ಚಿಕಿತ್ಸೆ ಮುಂದುವರೆದಿದ್ದು ಮಗು ಚೆನ್ನಾಗಿದೆ.
ಯಾರೂ ಕೋವಿಡ್ ಬಗ್ಗೆ ಭಯ ಪಡಬೇಕಿಲ್ಲ. ಆದರೆ ವಯೋವೃದ್ದರನ್ನು ಆದಷ್ಟು ಬೇಗ ಆಸ್ಪತ್ರೆಗೆ ತಲುಪಿಸುವ ಕೆಲಸ ಆಗಬೇಕು. ಇಲ್ಲಿ ಲೋಪವಾಗಬಾರದು ಎಂದ ಅವರು ಮನಸ್ಥಿತಿಯನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243