ದಿನದ ಸುದ್ದಿ
ದಾವಣಗೆರೆ ಗ್ರಿನ್ ಝೋನ್ ಗೆ ಸೇರ್ಪಡೆ : ಸಚಿವ ಭೈರತಿ ಬಸವರಾಜ್ ಸಂತಸ | ಏನಿರುತ್ತೆ..? ಏನಿರಲ್ಲ..? ಓದಿ ಈ ಸುದ್ದಿ
ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಜನಕ್ಕೆ ಸಂತಸದ ವಿಚಾರ, ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, 28 ದಿನಗಳಿಂದ ಪಾಸಿಟಿವ್ ಪ್ರಕರಣ ಇಲ್ಲದ ಕಾರಣ ಗ್ರೀನ್ ಜೋನ್ ಗೆ ಸರ್ಕಾರ ಸೇರ್ಪಡೆ ಮಾಡಿದೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.
ಜಿಲ್ಲಾಧಿಕಾರಿ ಗಳ ಕಚೇರಿಯಲ್ಲಿ ಹೇಳಿಕೆ ನೀಡಿದ ಸಚಿವ ಭೈರತಿ. ಜಿಲ್ಲೆಯ ಅಧಿಕಾರಿಗಳು ವೈದ್ಯರು ಉತ್ತಮ ಕಾರ್ಯ ನಿರ್ವಹಿಸಿದ ಹಿನ್ನೆಲೆ ದಾವಣಗೆರೆ ಗ್ರೀನ್ ಜೋನ್ ಗೆ ಬಂದಿದೆ. ಗ್ರೀನ್ ಜೋನ್ ಗೆ ಬಂದಿದೆ ಎಂದು ಸುಮ್ಮನಿರಲು ಆಗಲ್ಲ ಆದಷ್ಟು ಹೆಚ್ಚು ಪರೀಕ್ಷೆ ನಡೆಸಿ ಇನ್ನಷ್ಟು ಜಾಗೃತಿ ವಹಿಸುವಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಎನಿರುತ್ತೆ..? ಏನಿರಲ್ಲ..?
ಗ್ರೀನ್ ಜೋನ್ ಆಗಿದ್ದರಿಂದ ಚಿನ್ನದಂಗಡಿ ಹಾಗೂ ಬಟ್ಟೆ ಅಂಗಡಿ ಓಪನ್ ಮಾಡಬಹುದು. ಆದ್ರೆ ವೈನ್ ಶಾಪ್, ಸಿನೆಮಾ ಮಾಲ್ ಗಳು ಓಪನ್ ಮಾಡುವಂತಿಲ್ಲ.ಯಾವುದಕ್ಕೂ ಮೇ 3ರಂದು ನಿರ್ಧಾರ ಆಗಲಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243