ದಿನದ ಸುದ್ದಿ
14 ದಿನ ಚಿಕಿತ್ಸೆ ಮುಗಿದವರಿಂದ ಮೊತ್ತೊಮ್ಮೆ ಸ್ಯಾಂಪಲ್ ಸಂಗ್ರಹ, 1400 ಫಲಿತಾಂಶ ಬಾಕಿ : ಜಿಲ್ಲಾಧಿಕಾರಿ
ಸುದ್ದಿದಿನ,ದಾವಣಗೆರೆ: ಕೊರೊನಾದಿಂದ ಗುಣಮುಖರಾದ ಒಟ್ಟು 5 ಜನರನ್ನು ಗುರುವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಐದು ಜನರು ಪಿ-618, 620, 623, 628, 664 ಆಗಿದ್ದಿ ಇವರಲ್ಲಿ ಇಬ್ಬರು ಪುರುಷರು ಹಾಗೂ 3 ಜನ ಹೆಣ್ಣು ಮಕ್ಕಳಾಗಿದ್ದಾರೆ. ಬುಧವಾರ 7 ಜನ, ಇಂದು 5 ಹಾಗೂ ಹಳೆಯ 2 ಜನ ಸೇರಿ ಒಟ್ಟು 14 ಜನರನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ. 4 ಜನ ಸಾವನ್ನಪ್ಪಿದ್ದು ಒಟ್ಟು 115 ರಲ್ಲಿ 97 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದರು.
14 ದಿನ ಚಿಕಿತ್ಸೆ ಮುಗಿದವರ ಸ್ಯಾಂಪಲ್ ಸಂಗ್ರಹ
ಅವರನ್ನು ಕೂಡ ಪ್ರೋಟೊಕಾಲ್ ಪ್ರಕಾರ ಒಳ್ಳೆಯ ಚಿಕಿತ್ಸೆ ನೀಡಿ, ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆದಷ್ಟು ಬೇಗ ಗುಣಮುಖರಾನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. 14 ದಿನ ಚಿಕಿತ್ಸೆ ಮುಗಿದವರದ್ದು ಮೊತ್ತೊಮ್ಮೆ ಸ್ಯಾಂಪಲ್ ಸಂಗ್ರಹಿಸಿ ಕಳುಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗುವ ವಿಶ್ವಾಸ ಇದೆ ಎಂದರು.
1400 ವರದಿ ಬಾಕಿ
ಒಟ್ಟು 1400 ಸ್ಯಾಂಪಲ್ ಫಲಿತಾಂಶದ ವರದಿ ಬರಬೇಕಿದೆ. ಇವತ್ತು 601 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ಅದರಲ್ಲಿ ಶಿವಮೊಗ್ಗಕ್ಕೆ 200 ಸ್ಯಾಂಪಲ್ ಕಳುಹಿಸಿ ಕೊಡಲಾಗಿದೆ.
ಕೆಲವು ಸ್ಯಾಂಪಲ್‍ಗಳನ್ನು ಖಾಸಗಿ ಆನಂದ್ ಡಯಾಗ್ನೋಸ್ಟಿಕ್ ಸೆಂಟರ್‍ಗೆ ಹಾಗೂ ಉಳಿದ 60 ರಿಂದ 70 ಸ್ಯಾಂಪಲ್‍ಗಳನ್ನು ಸ್ಥಳೀಯ ಲ್ಯಾಬ್‍ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರದಿಂದ ಬಾಪೂಜಿ ಜೆಜೆಎಂ ಲ್ಯಾಬ್ ತೆರೆಯಲಿದ್ದು, ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243