ದಿನದ ಸುದ್ದಿ

ಬ್ರೇಕಿಂಗ್ | ರಾಜ್ಯದಲ್ಲಿ ಮತ್ತೆ ಕೊರೋನಾ‌ ಸೋಂಕಿತ 7 ಪ್ರಕರಣಗಳು ಪತ್ತೆ

Published

on

ಸುದ್ದಿದಿನ,ಬೆಂಗಳೂರು : ಕರ್ನಾಟಕ ‌ಸರ್ಕಾರವು ಇದೀಗ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಬಿಡುಗಡೆಮಾಡಿದ್ದು, ಮತ್ತೆ ಏಳು‌ ಜನಕ್ಕೆ ಕೊರೋನಾ‌ ಸೋಂಕು ‌ತಗುಲಿರುವುದನ್ನು ದೃಢಪಡಿಸಿದೆ.

ವಿಜಯಪುರದ 18 ವರ್ಷದ ಇಬ್ಬರು ಮಹಿಳೆಯರು ಮತ್ತು 30 ವರ್ಷದ ಒಬ್ಬ ಮಹಿಳೆಗೆ ಕೊರೋನಾ‌ ಸೋಂಕು ತಗುಲಿದೆ. ಹಾಗೇ ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ 67 ವರ್ಷದ ಮಹಿಳೆಗೆ ಮತ್ತು ಕಲಬುರಗಿಯ 29 ವರ್ಷದ, ಹಾಗೂ 61ವರ್ಷದ ಮತ್ತು 80 ವರ್ಷದ ಮೂವರು‌ ಪುರುಷರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ ಎಂದು ತಿಳಿಸಿದೆ.

ಈ ಮೂಲಕ‌ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆ ಆಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version