ದಿನದ ಸುದ್ದಿ

ದಾವಣಗೆರೆಯಲ್ಲಿ ಕೊರೋನಾ ಸೃಷ್ಟಿಸಿದ ಆತಂಕ; ‘ಹಸಿರು ಸಂಭ್ರಮ’ ಕಳೆಯಲು ಜಿಲ್ಲಾಡಳಿತ ಕಾರಣವಾಯಿತೆ ?

Published

on

ಸುದ್ದಿದಿನ ವಿಶೇಷ, ದಾವಣಗೆರೆ: ಕಳೆದ ಮೂರು ದಿನಗಳ ಹಿಂದೆ ಜಿಲ್ಲೆಯ ಜನರಲ್ಲಿದ್ದ ನಿರಾಳತೆ, ಸಂಭ್ರಮ ಈಗ ಮಾಯವಾಗಿದೆ. ಸದ್ಯ ದಾವಣಗೆರೆಯಲ್ಲಿ ಮತ್ತೆ ಬರೊಬ್ಬರಿ ಎಂಟು ಕೊರೋನಾದ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಶುಕ್ರವಾರ ಕರೋನಾ ಪೀಡಿತ ವೃದ್ಧ ಮೃತಪಟ್ಟಿದ್ದಾನೆ. ಈ ಸನ್ನಿವೇಶಗಳ ಸೃಷ್ಟಿಗೆ ಜಿಲ್ಲಾಡಳಿತವೇ ಕಾರಣವಾಯಿತೇ ಎಂಬ ಅನುಮಾನ ಜನರಲ್ಲಿ ಮೂಡಿವೆ.

ಲಾಕ್ ಡೌನ್ ಆರಂಭದಲ್ಲಿ ಜಿಲ್ಲೆಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದರೂ ಅದು ತನ್ನ ಕಬಂದಬಾಹು ಚಾಚದಂತೆ ನೋಡಿಕೊಳ್ಳುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿತ್ತು. ಬರೋಬ್ಬರಿ 28 ದಿನ ಪೂರೈಸುವ ಮೂಲಕ ಹಸಿರು ವಲಯಕ್ಕೆ ಎಂಟ್ರಿ ಕೊಟ್ಟಿತ್ತು. ಈ ಕಾರಣಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ಕಾರ್ಯಕ್ಕೆ ಶ್ಲಾಘನೆ ಕೂಡ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಅಧಿಕಾರಿಗಳ ಕಾರ್ಯದ ಬಗ್ಗೆ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ !

ದಾವಣಗೆರೆ ಜಿಲ್ಲೆ ಹಸಿರು ವಲಯಕ್ಕೆ ಸೇರಿದ ಕೂಡಲೇ ಜಿಲ್ಲೆಯ ಜನ ಅಪಾಯದಿಂದ ಪಾರಾದ ಬಗ್ಗೆ ನಿಟ್ಟುಸಿರು ಬಿಟ್ಟಿದ್ದರು. ಆದರೆ ಆ ಸಂಭ್ರಮ ಒಂದು ದಿನವೂ ಉಳಿಯಲಿಲ್ಲ. ಸರ್ಕಾರಿ ಆಸ್ಪತ್ರೆಯೊಂದರ ನರ್ಸ್ ಒಬ್ಬೊರಿಗೆ ಕೊರೋನ ಇರುವುದು ದೃಢಪಡುವ ಮೂಲಕ ಸಂಭ್ರಮ ಮಾಯವಾಯಿತು. ನಂತರ 69 ವರ್ಷದ ವೃದ್ಧರಲ್ಲಿ ಸೋಂಕು ಪತ್ತೆಯಾಯಿತು. ಅದಾದ ನಂತರ ಒಂದೇ ದಿನ ಒಂದೇ ಕುಟುಂಬದ 6 ಜನರಲ್ಲಿ ಮಹಾಮಾರಿ ಕರೋನಾ ಸೋಂಕು ಕಾಣಿಸಿಕೊಡ್ಡಿದ್ದು, ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿತು.

ಜನ ಸಮುದಾಯಕ್ಕೆ ಹರಡಿತೇ ಮಹಾಮಾರಿ ಕರೋನಾ ?

ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಜನ ಸಮುದಾಯಕ್ಕೆ ಹರಡಿಯೇ ಎಂಬ ಆತಂಕ ಮೂಡಿಸಿದೆ. ಶುಕ್ರವಾರ ಮೃತಪಟ್ಟ ವೃದ್ಧರಿಗೆ ಕರೋನಾ ಹೇಗೆ ಬಂತು ಎಂಬುದನ್ನು ಪತ್ತೆಹಚ್ಚುವಲ್ಲಿ ಜಿಲ್ಲಾಡಳಿತ ಹೆಚ್ಚು ತಲೆಕೆಡಿಸಿಕೊಂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕರೋನಾದಿಂದ ಮೃತಪಟ್ಟ ವೃದ್ಧ ಬೇರೆ ಪ್ರದೇಶದಿಂದ ಬಂದಿರಲಿಲ್ಲ. ಆತ ವ್ಯಾಪಾರಿಯಾಗಿದ್ದು, ಇಲ್ಲೇ ಇದ್ದ ಎಂದು ಹೇಳಲಾಗುತ್ತಿದೆ. ಅಂದರೆ ಆತನಿಗೆ ಹೇಗೆ ಹರಡಿತು ಸೋಂಕು ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ಜಿಲ್ಲಾಡಳಿತ ಕೊನೆಯಲ್ಲಿ ಹಾದಿ ತಪ್ಪಿತೇ ?

ಲಾಕ್ ಡೌನ್ ಆರಂಭದಲ್ಲಿ ಕೈಗೊಂಡಿದ್ದ ಬಿಗಿ ಭದ್ರತೆ ಕೊನೆಯಲ್ಲಿ ಕಾಣೆಯಾಯಿತು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಜಿಲ್ಲೆಯ ಕೆಲವು ಜನರು ಕೂಡ ಆಡಳಿತ ವ್ಯವಸ್ಥೆಗೆ ಸಹಕಾರ ನೀಡದೇ ಬೇಕಾಬಿಟ್ಟಿಯಾಗಿ ಹೊರಗಡೆ ಸಂಚರಿಸುದ್ದು ಸಂಷ್ಟದ ಪರಿಸ್ಥಿತಿಗೆ ಕಾರಣವಾಯಿತು ಎಂಬ ಅಪವಾದದ ಮಾತು ಕೇಳಿ ಬರುತ್ತಿವೆ. ಹೊರಗಡೆಯಿಂದ ಬರುವ ಚೆಕ್ ಪೋಸ್ಟ್ ಗಳಲ್ಲಿ ಆರಂಭದಲ್ಲಿ ತೆಗೆದುಕೊಂಡಿದ್ದ ಕಠಿಣ ನಿಲುವನ್ನು ಜಿಲ್ಲಾಡಳಿತ ಸಡಿಲಿಸಬಾರದಿತ್ತು. ಜೊತೆಗೆ ಜಿಲ್ಲೆಯ ಜನರು ಕೂಡಾ ಜಿಲ್ಲಾಡಳಿತ ಹಾಗೂ ಪೊಲೀಸ್ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡಬೇಕಿತ್ತು ಎಂದು ಪ್ರಜ್ಞಾವಂತ ನಾಗಕರಿಕರು ಹೇಳುತ್ತಿದ್ದಾರೆ.

ಜಿಲ್ಲೆಯಲ್ಲಿ ಈ ವರೆಗಿನ ಕೊರೊನಾ ಸ್ಥಿತಿಗತಿ

  1. ಪಿ-556 ರಿಂದ ಈ ದಿನ ಹೊಸ ಪಿ-580, ಪಿ-581, ಪಿ-582, ಪಿ-583, ಪಿ-584 ಪ್ರಾಥಮಿಕ ಸಂಪರ್ಕದಿಂದ 5 ಪ್ರಕರಣಗಳು ಖಚಿತಪಟ್ಟಿದ್ದು, ಚಿಕಿತ್ಸೆಗಾಗಿ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುತ್ತಾರೆ. (ಪಿ-556 ಶುಕ್ರವಾರ ಮೃತ ಪಟ್ಟಿದ್ದಾರೆ.)
  2. ಪಿ-556 ಪ್ರಕರಣದಿಂದ ಒಟ್ಟು 12 ಪ್ರಾಥಮಿಕ ಸಂಪರ್ಕ ಮತ್ತು 17 ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಲಾಗಿದೆ.
  3. ಪಿ-533 ರಿಂದ ಪಿ-585 ಈ ದಿನ ಹೊಸ ಪ್ರಕರಣವು ಪ್ರಾಥಮಿಕ ಸಂಪರ್ಕದಿಂದ ಖಚಿತಪಟ್ಟಿದ್ದು, ಚಿಕಿತ್ಸೆಗಾಗಿ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಪಿ-533 ಪ್ರಕರಣದಿಂದ ಒಟ್ಟು 25 ಪ್ರಾಥಮಿಕ ಸಂಪರ್ಕ ಮತ್ತು 45 ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಲಾಗಿದೆ.
  4. ಪಿ-533 ಮತ್ತು ಪಿ-556 ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದವರ ಗಂಟಲು ದ್ರವದ ಮಾದರಿಗಳನ್ನು ತೆಗೆದುಕೊಂಡಿದ್ದು, ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಘೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.
  5. ಜಾಲಿನಗರ ಹಾಗೂಬಾಷಾ ನಗರ ಪ್ರದೇಶವನ್ನು ಕಂಟೈನ್‍ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ. ಸುತ್ತಲಿನ 5 ಕಿ.ಮೀ ಪ್ರದೇಶವನ್ನು ಬಫರ್ ಝೋನ್ ಎಂದು ಪರಿಗಣಿಸಿ ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ವಯ ಸರ್ವೇ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ.
  6. ಖಚಿತಪಟ್ಟ ಪ್ರಕರಣಗಳು ಬಂದಿರುವ ಬಾಷಾನಗರ ಎಪಿಸೆಂಟರ್ ಕಂಟೈನ್‍ಮೆಂಟ್ ಝೋನ್‍ನಲ್ಲಿ ಈ ದಿನ 909 ಮನೆಗಳಿಂದ 4553 ಜನರನ್ನು ಸಂದರ್ಶಿಸಿ ಫ್ಲೂ (IಐI) ಸಮೀಕ್ಷೆಯನ್ನು ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರನ್ನೊಳಗೊಂಡ 28 ತಂಡಗಳಿಂದ ನಡೆಸಲಾಯಿತು. ಈ ದಿನ ಲಕ್ಷಣಗಳು ಇರುವ ಯಾವುದೇ ವ್ಯಕ್ತಿಗಳು ಇರುವುದಿಲ್ಲ. ಸಂಚಿತ ಮನೆಗಳು : 909, ಜನಸಂಖ್ಯೆ : 4553, ಲಕ್ಷಣಗಳು ಇರುವ ಯಾವುದೇ ವ್ಯಕ್ತಿಗಳು ಕಂಡುಬಂದಿರುವುದಿಲ್ಲ.
  7. ಖಚಿತಪಟ್ಟ ಪ್ರಕರಣಗಳು ಬಂದಿರುವ ಜಾಲಿನಗರ ಎಪಿಸೆಂಟರ್‍ನ ಕಂಟೈನ್‍ಮೆಂಟ್ ಝೋನ್‍ನಲ್ಲಿ ಈ ದಿನ 1023 ಮನೆಗಳಿಂದ 4142 ಜನರನ್ನು ಸಂದರ್ಶಿಸಿ ಫ್ಲೂ (IಐI) ಸಮೀಕ್ಷೆಯನ್ನು ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರನ್ನೊಳಗೊಂಡ 28 ತಂಡಗಳಿಂದ ನಡೆಸಲಾಯಿತು. ಈ ದಿನ ಲಕ್ಷಣಗಳು ಇರುವ ಯಾವುದೇ ವ್ಯಕ್ತಿಗಳು ಇರುವುದಿಲ್ಲ. ಸಂಚಿತ ಮನೆಗಳು : 1023, ಜನಸಂಖ್ಯೆ : 4142, ಲಕ್ಷಣಗಳು ಇರುವ ಯಾವುದೇ ವ್ಯಕ್ತಿಗಳು ಕಂಡುಬಂದಿರುವುದಿಲ್ಲ.
  8. ದುರ್ಬಲ ಆರೋಗ್ಯವಿರುವವರ ಸಮೀಕ್ಷೆಯನ್ನು ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯವರಿಂದ ನಡೆಸಿ ಫ್ಲೂ ಲಕ್ಷಣಗಳು ಕಂಡು ಬಂದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version