ದಿನದ ಸುದ್ದಿ

ಧಾರವಾಡ | ಗುಜರಾತ್ ನಿಂದ ಬಂದ 09 ಜನರಿಗೆ ಕೊರೋನಾ ಪಾಸಿಟಿವ್

Published

on

ಸುದ್ದಿದಿನ,ಧಾರವಾಡ : ಗುಜರಾತಿನ ಅಹಮದಾಬಾದ್ ನಗರದಿಂದ ಜಿಲ್ಲೆಗೆ ಆಗಮಿಸಿರುವ 09 ಜನರಲ್ಲಿ ಕೋವಿಡ್ ಪಾಸಿಟಿವ್ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಗುಜರಾತಿನಿಂದ ಆಗಮಿಸಿದ ಈ ಎಲ್ಲಾ ವ್ಯಕ್ತಿಗಳನ್ನು ಜಿಲ್ಲೆಯ ಆಗಮನ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡು ಪ್ರತ್ಯೇಕವಾಗಿ ಇರಿಸಲಾಗಿತ್ತು. ಬಂದ ಕೂಡಲೇ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಸೋಂಕು ದೃಢಪಟ್ಟಿರುವದರಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪೇಶಂಟ್ ನಂಬರ್

ಪಿ- 879 ( 55 ) ,ಪಿ-880 (31),ಪಿ-881 ( 25)
ಪಿ-882 (70),ಪಿ-883 (26),ಪಿ-884 (18), ಪಿ-885 (19),ಪಿ-886 (20),ಪಿ-887 (27)

ಈ ಎಲ್ಲಾ ಒಂಬತ್ತು ಜನ ಪುರುಷರಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವದರಿಂದ
ಜಿಲ್ಲೆಯಲ್ಲಿ ಇದುವರೆಗೆ ಪ್ರಕರಣಗಳ ಸಂಖ್ಯೆ 21 ರಷ್ಟಾಗಿವೆ. ಪ್ರಕರಣವಾಗಿದೆ. ಈಗಾಗಲೇ 07 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version