ದಿನದ ಸುದ್ದಿ
ಕೋವಿಡ್19 | ರಾಜ್ಯದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 88
ಸುದ್ದಿದಿನ, ಬೆಂಗಳೂರು : ಕೊರೋನಾ ವೈರಸ್ ನಿಂದ ಇಡೀ ಜಗತ್ತು ಅಕ್ಷರಶಃ ತತ್ತರಿಸಿ ಹೋಗಿದೆ. ಕೊರೋನಾ ನಿಯಂತ್ರಿಸಲು ದೇಶಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭಾರತವೂ ಸಹ ಇದರ ಸಾಲಿಗೆ ಸೇರುತ್ತದೆ.
ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ, ಸಂಘ ಸಂಸ್ಥೆಗಳು, ಡಾಕ್ಟರ್ ಗಳು, ಪೊಲೀಸ್, ಇತರೆ ಪ್ರತಿನಿಧಿಗಳು ಕೊರೋನಾದಿಂದ ಮುಕ್ತವಾಗಲು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಈವರೆಗೆ ಕೊರೋನಾ ಸೋಂಕಿತರು,ಮೃತಪಟ್ಟವರು, ಗುಣಮುಖರಾದವರು ಹಾಗೂ ಹೊಸ ಪ್ರಕರಣಗಳು ಈ ಕೆಳಗಿನಂತಿವೆ.
ಶುಕ್ರವಾರದ ವಿವರ
- ಒಟ್ಟು ದೃಢಪಟ್ಟ ಪ್ರಕರಣಗಳು: 359
- ಮೃತಪಟ್ಟವರು: 13
- ಗುಣಮುಖರಾದವರು: 88
- ಹೊಸ ಪ್ರಕರಣಗಳು: 44
ಇತರೆ ಉಪಯುಕ್ತ ಮಾಹಿತಿ
ಜಿಲ್ಲಾವಾರು ಸೋಂಕಿತರ ಮಾಹಿತಿ, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರ ವಿವರ, ಟೆಲಿಮೆಡಿಸಿನ್ ಹಾಗೂ ಆಪ್ತ ಸಮಾಲೋಚನಾ ಸೌಲಭ್ಯಗಳ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗಾಗಿ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳನ್ನು ‘ಆರೋಗ್ಯ ಸೇತು’ ಅಪ್ಲಿಕೇಶನ್ ನಲ್ಲಿ ಪಡೆಯಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243