ದಿನದ ಸುದ್ದಿ
ಕೋವಿಡ್ -19 | ಮೇ ಅಂತ್ಯಕ್ಕೆ ಟಾಪ್-5ನಲ್ಲಿ ಭಾರತ..!?
ಸುದ್ದಿದಿನ ಡೆಸ್ಕ್ : ಭಾರತ ಸದ್ಯ 11ನೇ ಸ್ಥಾನದಲ್ಲಿದೆ ಹತ್ತನೇ ಸ್ಥಾನದಲ್ಲಿರುವ ಇರಾನ್ ಹಾಗೂ ಭಾರತಕ್ಕೂ ಎರಡು ಸಾವಿರ ಸೋಂಕಿತರ ಅಂತರವಿದ್ದು ಇಂದು ಬೆಳಗ್ಗಿನ ಹೆಲ್ತ್ ಬುಲೆಟಿನ್ ವೇಳೆಗೆ ಭಾರತ ಇರಾನ್ ಹಿಂದಿಕ್ಕಿ ಹತ್ತನೇ ಸ್ಥಾನಕ್ಕೆ ಬರಲಿದ್ದು ಅಲ್ಲಿಗೆ ವಿಶ್ವದ ಅತಿ ಹೆಚ್ಚು ಕೊರೊನಾ ಪೀಡಿತ ದೇಶಗಳ ಟಾಪ್ ಪಟ್ಟಿಯಲ್ಲಿ ಭಾರತ 10ನೇ ಸ್ಥಾನ ಪಡೆಯಲಿದೆ.
ತಜ್ಞರು ಹೇಳುವ ಪ್ರಕಾರ ಇದು ನಿಲ್ಲುವ ಲಕ್ಷಣಗಳು ಕಾಣ್ತಿಲ್ಲ. ದಿನವೊಂದಕ್ಕೆ ಆರು ಸಾವಿರ ಪ್ರಕರಣಗಳು ಭಾರತದಲ್ಲಿ ಸದ್ಯ ಪತ್ತೆಯಾಗುತ್ತಿದ್ದು, ಹೀಗೆ ಮುಂದುವರಿದ್ರೆ ಮೇ ಅಂತ್ಯದ ವೇಳೆಗೆ ಟಾಪ್ 5 ಸ್ಥಾನದಲ್ಲಿರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243