ದಿನದ ಸುದ್ದಿ
ಕೋವಿಡ್ ನಿಯಂತ್ರಣ : 6 ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ; ಡಿಸಿಜಿಐ ಅನುಮೋದನೆ
ಸುದ್ದಿದಿನ ಡೆಸ್ಕ್ : ಕೋವಿಡ್ ನಿಯಂತ್ರಣಕ್ಕಾಗಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಮಕ್ಕಳ ಲಸಿಕೆಯನ್ನು ನಿರ್ಬಂದಿತ ತುರ್ತು ಬಳಕೆಗೆ ಭಾರತಿಯ ಔಷಧ ಮಹಾನಿಯಂತ್ರಕರು ಅನುಮೋದನೆ ನೀಡಿದ್ದಾರೆ.
6 ರಿಂದ 12ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆಯನ್ನು ನೀಡಲು ಅನುಮೋದನೆ ನೀಡಲಾಗಿದೆ. 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬೆವ್ಯಾಕ್ಸ್ ಲಸಿಕೆಯನ್ನು ತುರ್ತು ಬಳಕೆಗೆ ಮಹಾ ನಿಯಂತ್ರಕರು ಒಪ್ಪಿಗೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಸಂದೇಶದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವೀಯ, 12 ವರ್ಷದ ಮಕ್ಕಳಿಗೆ ಜೈಕೋವಿಡ್ ಲಸಿಕೆಯ ಎರಡು ಡೋಸ್‌ಗಳನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಡಿಸಿಜಿಐ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
भारत की कोविड से लड़ाई अब और अधिक मज़बूत @CDSCO_INDIA_INF ने
>6 से <12 आयुवर्ग के लिए 'Covaxin'
>5 से <12 आयुवर्ग के लिए 'Corbevax'
12 से ऊपर के आयुवर्ग के लिए 'ZyCoV-D' की 2 डोज को
'Restricted Use in Emergency Situations' की मंज़ूरी दी है।
— Dr Mansukh Mandaviya (@mansukhmandviya) April 26, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243