ದಿನದ ಸುದ್ದಿ
ಗಂಡನ ಕೊಂದ ಹೆಂಡತಿ ರಹಸ್ಯ ಬಯಲು..!
ಸುದ್ದಿದಿನ,ಬೆಂಗಳೂರು: ಹೆಂಡತಿಯೇ ಗಂಡನನ್ನ ಕೊಂದ ರಹಸ್ಯ ಒಂದು ವರ್ಷದ ಬಳಿಕ ಬೆಳಕಿಗೆ ಬಂದಿದೆ.ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸೇನಹಳ್ಳಿಯಲ್ಲಿ ನಡೆದಿದ್ದ ಈ ಘಟನೆ, ಕಳೆದ ವರ್ಷ ಗಾರೆಕೆಲಸ ಮಾಡುತ್ತಿದ್ದ ಉಮಾಶಂಕರ್(30)ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ.
ಘಟನೆ ಬಳಿಕ ಆತನ ಪತ್ನಿ ನೀಡಿದ ಮಾಹಿತಿ ಮೆರೆಗೆ ಆತ್ಮಹತ್ಯೆ ಪ್ರಕರಣ ಅಂತ ದಾಖಲಿಸಿಕೊಂಡಿದ್ದ ಸೋಲದೇವನಹಳ್ಳಿ ಪೊಲೀಸರು, ಘಟನೆ ಬಳಿಕ ಮರಣೋತ್ತರ ಪರೀಕ್ಷೆ ಹಾಗೂ ಎಫ್ ಎಸ್ ಎಲ್ ರಿಪೋರ್ಟ್ ನಲ್ಲಿ ಆತ್ಮಹತ್ಯೆ ಯಲ್ಲ ಕೊಲೆ ಅನ್ನೋದು ಸಾಬೀತಾಗಿದೆ.
ಈ ಹಿನ್ನೆಲೆ ಮೃತ ಉಮಾಶಂಕರ್ ಪತ್ನಿ ಸುಖಿತಾ(25) ಹಾಗೂ ಆಕೆಯ ಜೊತೆಗಿದ್ದ ಚಾಲಕ ಶ್ರೀನಿವಾಸ್ ನನ್ನು ಪೋಲಿಸರು ಬಂಧಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401