ದಿನದ ಸುದ್ದಿ

ಅಪರಾಧ ಕಾರ್ಯ ವಿಧಾನ ಕಾಯ್ದೆ – 2022 : ಇಂದಿನಿಂದ ಜಾರಿ

Published

on

ಸುದ್ದಿದಿನ ಡೆಸ್ಕ್ : ಕ್ರಿಮಿನಿಲ್ ಪ್ರೊಸಿಜರ್ ( Criminal Procedure) -ಗುರುತಿಸುವಿಕೆ 2022 ಕಾನೂನು ಇಂದಿನಿಂದ ಜಾರಿಗೆ ಬಂದಿದೆ.

ಅಪರಾಧಿಗಳು (Criminal) ಮತ್ತು ಅಪರಾಧಗಳ (crime) ಪ್ರಮಾಣ ಗುರುತಿಸುವ ಹಾಗೂ ತನಿಖೆ ( Investigation) ಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಕಾನೂನು (law) ಜಾರಿಗೆ ಬಂದಿದೆ.

ಇದನ್ನೂ ಓದಿ | ಸಿದ್ದರಾಮೋತ್ಸವ ; ಇದು ಗೂಗ್ಲಿಯೂ ಹೌದು; ಮೊದಲ ಬಾಲಿಗೆ ಸಿಕ್ಸರೂ ಹೌದು!

ಕ್ರಿಮಿನಲ್ ಪ್ರೊಸಿಜರ್ ತಿದ್ದುಪಡಿಗೆ ನ್ಯಾಯಸಮ್ಮತ ಅಧಿಕಾರ ಹಾಗೂ ತನಿಖೆಯನ್ನು ಸರಿಯಾದ ಮಾರ್ಗದಲ್ಲಿ ಕೊಂಡಯ್ಯಲು ನೂತನ ಕಾನೂನು ಸಹಕಾರಿಯಾಗಲಿದೆ.

ಅಪರಾಧಿಗಳ ಛಾಯಾಚಿತ್ರ ಬೆರಳಚ್ಚು ದಾಖಲು, ಕಣ್ಣಿನ ಒಳಪದರಿನ ಮಾಹಿತಿ, ದೈಹಿಕ ವಿವರಗಳನ್ನು ಪತ್ತೆಮಾಡಿ ಸಂರಕ್ಷಿಸುವ ವಿಧಾನ ಇದಾಗಿದೆ. ಅಪರಾಧಿಗಳ ಸಂಪೂರ್ಣ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲು ಸಂಗ್ರಹ ಕೇಂದ್ರದಲ್ಲಿ ನಮೂದಿಸುವ ಮೂಲಕ ಅಪರಾಧಿಗಳ ಎಲ್ಲ ವಿವರಗಳು ಪೊಲೀಸರಿಗೆ ಸಕಾಲಕ್ಕೆ ಲಭ್ಯವಾಗಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version