ದಿನದ ಸುದ್ದಿ
ಕಾವೇರಿ ನದಿ ದಂಡೆಯಲ್ಲಿ ಮೊಸಳೆ ಪತ್ಯಕ್ಷ !
ಸುದ್ದಿದಿನ, ಹಾಸನ: ಅರಕಲಗೂಡು ತಾಲೂಕಿನ ರಾಮನಾಥಪುರ ಬಳಿಯ ಕಾವೇರಿ ನದಿ ದಂಡೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಊಟಿ-ಹಾಸನದ ಮಧ್ಯದ ಕಾವೇರಿ ನದಿ ದಂಡೆಯಲ್ಲಿ ಮೊಸಳೆ ಪತ್ಯಕ್ಷವಾಗಿದೆ. ಎರಡನೇ ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದಿರುವ ರಾಮನಾಥಪುರ ದೇಗುಲ ಹತ್ತಿರವೇ ಇದ್ದು, ಪ್ರತಿದಿನ ಸಾವಿರಾರು ಭಕ್ತರು ನದಿಯಲ್ಲಿ ಮಿಂದು ಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆಯುತ್ತಾರೆ. ಈಗ ಮೊಸಳೆ ಪ್ರತ್ಯಕ್ಷ ದಿಂದ ಸ್ಥಳೀಯರು ಹಾಗೂ ಭಕ್ತರಲ್ಲಿ ಹೆಚ್ಚಿದ ಆತಂಕ ಹೆಚ್ಚಿಸಿದೆ.