ದಿನದ ಸುದ್ದಿ

ಮೊಸಳೆಗಳ ಅಳಿವು-ಉಳಿವು..?

Published

on

ಸುದ್ದಿದಿನ ಡೆಸ್ಕ್ | ಕೋಳಿ, ಕುರಿ, ಆಡು, ಮೇಕೆ, ಹಸು, ಎಮ್ಮೆ, ಹಂದಿ ಸಾಕಣೆ ಬಗ್ಗೆ ಕೇಳಿದ್ದಿರಿ. ಆದರೆ, ಮೊಸಳೆ ಸಾಕಾಣಿಕೆ ಬಗ್ಗೆ ಗೊತ್ತಿದೆಯಾ? ಬಹುತೇಕರಿಗೆ ಇದು ತಿಳಿಯದೇ ಇರಬಹುದು. ಇಸ್ರೇಲಿನ ಜೋರ್ಡಾನ್ ಕಣಿವೆಯಲ್ಲಿ ವ್ಯಕ್ತಿಯೊಬ್ಬ ಸಾಹಸ ಕೆಲಸಕ್ಕೆ ಕೈ ಹಾಕಿ ವಿಫಲನಾಗಿದ್ದಾನೆ.!? ಇಸ್ರೇಲಿನ ಜೋರ್ಡಾನ್ ಕಣಿವೆಯಲ್ಲಿ ಪಶ್ಚಿಮ ದಡದಲ್ಲಿ ನೂರಾರು ಮೊಸಳೆಗಳ ಸಾಕಣೆ ಉದ್ಯಮ ಆರಂಭಿಸಲಾಗಿತ್ತು. ಆದರೆ, ಅಲ್ಲಿನ ಸರ್ಕಾರ 2012ರಲ್ಲಿ ಹೊರಡಿಸಿದ ಆದೇಶದಿಂದ ಉದ್ದಿಮೆ ಪ್ಲ್ಯಾನ್ ತೆಲೆಗೆಳಗಾಗಿದೆ.

ಈಚೆಗಷ್ಟೇ ಸಾವಿರಾರು ಮೊಸಳೆಗಳನ್ನು ಕೊಂದ ಘಟನೆ ನೆನಪಿನಿಂದ ಮಾಸುವ ಮೊದಲೆ ಇಸ್ರೇಲ್ ನ ನದಿವೊಂದರಲ್ಲಿ ಮೊಸಳೆಗಳ ಕಥೆ ಶುರು ವಾಗಿದೆ. ಇದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಇಸ್ರೇಲ್ ನ ಪೆಟ್ಜೆಲ್ ಸೆಟಲ್ ಮೆಂಟ್ ಎಂಬಲ್ಲಿ ಪ್ರವಾಸಿ ತಾಣ ಅಭಿವೃದ್ಧಿಗಾಗಿ ಕರೆತಂದು ಬಿಟ್ಟಿದ್ದ ಮೊಸಳೆಗಳು ಈಗ ನೂರಾರಾಗಿದ್ದು, ಅವುಗಳ ಅಳಿವು ಉಳಿವು ಪ್ರಶ್ನೆ ಎದುರಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version