ದಿನದ ಸುದ್ದಿ
ಕ್ರೂಸರ್ ವಾಹನ ಕಾಲುವೆಗೆ ಬಿದ್ದು ವಾಹನ ಚಾಲಕ ಸಾವು
ಸುದ್ದಿದಿನ,ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಬಾವಿ ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ಘಟಪ್ರಭಾ ಎಡದಂಡೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಕ್ರೂಸರ್ ವಾಹನ ಉರುಳಿ ಬಿದ್ದಿದೆ.ಘಟನೆಯಲ್ಲಿ ಕ್ರೂಸರ್ ಚಾಲಕ ಕಾಶಪ್ಪ ಉತ್ತೂರು (55) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತ ಚಾಲಕ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪೂರ ಪಟ್ಟಣದವ ನಾಗಿದ್ದು, ಮಹಾಲಿಂಗಪೂರ ದಿಂದ ರಾಯಬಾಗ ಪಟ್ಟಣಕ್ಕೆ ವಾಹನ ಹೊರಟಿತ್ತು. ಕಾಲುವೆಯಲ್ಲಿ ಮುಳುಗಿದ ಕ್ರೂಸರ್ ವಾಹನ, ಚಾಲಕನ ಶವವನ್ನು ಅಗ್ನಿಶಾಮಕ ದಳದಿಂದ ಶವ ಹಾಗೂ ವಾಹನ ಹೊರ ತೆಗೆದಿದ್ದಾರೆ.
ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401