ಲೈಫ್ ಸ್ಟೈಲ್

ಸೌತೆಕಾಯಿ‌ ತಿನ್ನಿ ‘ಆಲ್ ಈಸ್ ವೆಲ್’ ಎನ್ನಿ..!

Published

on

ಕ್ಷಿಣ ಏಷಿಯಾ ಮೂಲದಿಂದ ಬಂದ ಸೌತೆಕಾಯಿ ಈಗ ವಿಶ್ವವ್ಯಾಪಿ. ಜಗತ್ತಿನ ಎಲ್ಲ ಭಾಗಗಳಲ್ಲೂ ಬೆಳೆಯುವ ಸೌತೆಕಾಯಿ, ಆರೋಗ್ಯಪೂರ್ಣ ಜೀವನಕ್ಕೆ ಅತ್ಯಂತ ಸಮೃದ್ಧ ತರಕಾರಿ. ಸಂಪೂರ್ಣ ಆರೋಗ್ಯಕ್ಕೆ ಅದರ ಸೇವನೆ ಬಹು ಮುಖ್ಯ. ನಾವು ಈ ಸೌತೆಕಾಯಿ ಯನ್ನು ನಮ್ಮ ಮನೆ ಹಿಂಬದಿ ಇಲ್ಲವೆ ಟೆರಸ್ ಮೇಲೋ ಸೌವತೆ ಬಳ್ಳಿಯನ್ನು ಬೆಳೆಯಬಹುದು. ಸೌತೆಕಾಯಿಯನ್ನು ಸೃಷ್ಟಿಯ ಪೊರಕೆ ಎಂದೂ ಕೂಡ ಕರೆಯುತ್ತಾರೆ.

ಸೌತೆಕಾಯಿಯ ಉಪಯೋಗಗಳು

  • ಅದು ಶರೀರದಲ್ಲಿನ ಅನುಪಯುಕ್ತ ಹಾಗು ವಿಷಕಾರಕ ವಸ್ತುಗಳನ್ನು ಗುಡಿಸಿ ಹೊರಹಾಕುತ್ತದೆ.
  • ನಿತ್ಯ ಸೇವನೆಯಿಂದ ಮೂತ್ರ ಪಿಂಡದಲ್ಲಿನ ಕಲ್ಲುಗಳು ಕರಗುತ್ತವೆ.
  • ಎದೆ, ಗರ್ಭಾಶಯ, ಅಂಡಾಶಯ, ಪ್ರಾಸ್ಟೇಟ ಮುಂತಾದ ಕ್ಯಾನ್ಸರ್‌ ಗಳನ್ನು ತಪ್ಪಿಸುತ್ತದೆ.
  • ನಿಮ್ಮ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.
  • ಸೌತೆಕಾಯಿಯಲ್ಲಿನ ಹೆಚ್ಚು ನೀರಿನ ಪ್ರಮಾಣ ಹಾಗು ಕಡಿಮೆ ಕ್ಯಾಲೋರಿಯಿಂದಾಗಿ ಅದು ಪಚನ ಕ್ರಿಯೆಗೆ ತುಂಬ ಅನಕೂಲಕರ. ಅದರಲ್ಲಿನ ನಾರಿನ ಅಂಶ ಮಲಬದ್ಧತೆಯಿಂದ ಬಳಲುವವರಿಗೆ ವರವಾಗಿದೆ.
  • ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಅದು ಅತ್ಯಂತ ಉಪಯುಕ್ತ ಆಹಾರ. ಸೌತೆಕಾಯಿ ರಸ ಇನ್ಸುಲಿನ್ ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿಗೆ ಸಹಾಯ ಮಾಡುತ್ತದೆ.
  • ಜೊತೆಗೆ ಅದು ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಲು ತುಂಬ ಸಹಕಾರಿ. ಇದರಲ್ಲಿ ಪೊಟ್ಯಾಸಿಯಂ ಹಾಗು ಮ್ಯಾಗ್ನೇಸಿಯಂ ಇರುವದರಿಂದ ರಕ್ತದ ಒತ್ತಡವನ್ನು ಅದು ನಿಯಂತ್ರಿಸುತ್ತದೆ.
  • ಅದರಲ್ಲಿ ಇರುವ ಸಕ್ಕರೆ, ಬಿ ಜೀವನಸತ್ವ, ಎಲೆಕ್ಟ್ರೋಲೈಟ ಮುಂತಾದವುಗಳು ನಮ್ಮ ದೇಹಕ್ಕೆ ಅವಶ್ಯ ಇರುವ ಪೋಷಕಾಂಶಗಳನ್ನು ಒದಗಿಸತ್ತದೆ.
  • ಚರ್ಮದ ಉರಿ ಹಾಗು ಸನ್‌ಬರ್ನ್ಸಗಳಲ್ಲಿ ಸೌತೆಕಾಯಿ ರಸ ತುಂಬ ಪ್ರಯೋಜನಕ್ಕೆ ಬರುತ್ತದೆ.
  • ಕಣ್ಣುಗಳ ಉರಿತ/ನೋವು ಇದ್ದರೆ ಕಣ್ಣು ಮುಚ್ಚಿ, ಕಣ್ಣಿನ ರೆಪ್ಪೆಯ ಮೇಲೆ ಸೌತೆಕಾಯಿಯ ಹೋಳುಗಳನ್ನು ಇಟ್ಟರೆ ಅದು ನಮ್ಮ ತೊಂದರೆಯನ್ನು ನಿವಾರಿಸುತ್ತದೆ.
  • ಸೌವತೆಕಾಯಲ್ಲಿರುವ ಸಿಲಿಕಾನ್ ಹಾಗು ಸಲ್ಫರ್ ಇರುವುದರಿಂದ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

ಹಾಗೇ ಬರೀ ಆರೋಗ್ಯದ ವಿಷಯದಲ್ಲಿ ಮಾತ್ರ ಅಲ್ಲ ಬೇರೆ ವಿಷಯದಲ್ಲೂ ಸೌತೆಕಾಯಿಂದ ಪ್ರಯೋಜನ ಪಡೆಯಬಹುದು. ನಮ್ಮ ಮನೆಯ ಕನ್ನಡಿ ಕಲೆಗಳಿಂದ ಮಂಕಾಗಿದ್ದರೆ, ಅದನ್ನು ಸೌತೆಕಾಯಿ ಹೋಳುಗಳಿಂದ ತಿಕ್ಕಿ ಸ್ವಚ್ಛಗೊಳಿಸಬಹುದು. ಮನೆಯ ಬಾಗಿಲು-ಕಿಡಕಿಗಳ ಹಿಂಜಿಸ್‌ಗಳು, ಮುಚ್ಚುವಾಗ ತೆರೆಯುವಾಗ ಕರ್ಣಕಠೋರವಾದ ಕೀಜಲು ಸ್ವರವನ್ನು ಹೊರಡಿಸುತ್ತಿದ್ದರೆ; ಸೌತೆಕಾಯಿ ಅದಕ್ಕೂ ಪರಿಹಾರ ನೀಡಬಲ್ಲದು. .

ಸೌತೆಕಾಯಿಯನ್ನು ಅಡುಗೆಯಲ್ಲಿ ಹೀಗೆಲ್ಲ ಬಳಸಬಹುದು

  • ಸೌತೆಕಾಯಿ ಕೊಸಂಬರಿ
  • ಸೌತೆಕಾಯಿ ಅವಲಕ್ಕಿ
  • ಸೌತೆಕಾಯಿ ರೊಟ್ಟಿ
  • ಸೌತೆಕಾಯಿ ಜ್ಯೂಸ್
  • ಸೌತೆಕಾಯಿ ಮೊಸರು ಬಜ್ಜಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version