ದಿನದ ಸುದ್ದಿ
ರಕ್ತಹೀನತೆ ನಿವಾರಣೆಗೆ ರಾಮಬಾಣ ಆಗಿರುವ ಸೀತಾಫಲದ ಹಲವು ಉಪಯೋಗ ತಿಳಿಯಿರಿ
ಆರೋಗ್ಯದ ಸಿರಿ ಹೆಚ್ಚಿಸುವ ಸೀತಾಫಲದ ತವರು ದಕ್ಷಿಣ ಅಮೆರಿಕಾ. ಇದಕ್ಕೆ ಅಲ್ಲಿ ‘ಆತಾ’ ಎಂಬ ಹೆಸರಿದೆ ಎಂದು ಹೇಳಲಾಗುತ್ತದೆ. ಹಿಂದಿಯಲ್ಲಿ ‘ಆತ್’ ಗುಜರಾತಿನಲ್ಲಿ ‘ಆಟ’ ಮರಾಠಿಯಲ್ಲಿ ‘ಆತಾಫಾಲ್’ ಎಂದು ಕರೆಯುತ್ತಾರಂತೆ.
ಇದರ ವೈಜ್ಞಾನಿಕ ಹೆಸರು – ಅನೋನಾಸ್ವಾಮೋಸಾ, ಇಂಗ್ಲಿಷ್ ಹೆಸರು ಕಸ್ಟರ್ಡ್ ಆಪಲ್, ‘ಅನೋನಾ ರೆಟಿಕ್ಯುಲಾಟಾ’ ಅದೇ ಜಾತಿಯ ಇನ್ನೊಂದು ಹೆಣ್ಣು. ಇದನ್ನು ರಾಮಫಲ ಎಂದು ಕರೆಯುತ್ತಾರೆ.
ಪೋಷಕಾಂಶಗಳು
- ಜಲಾಂಶ-70.5 ಗ್ರಾಂ
- ಶರ್ಕರಪಿಷ್ಟ-23.5 ಗ್ರಾಂ
- ಕಬ್ಬಿಣ-1.5 ಮಿ. ಗ್ರಾಂ
- ವಿಟಮಿನ್ ಸಿ-37.ಮಿ.ಗ್ರಾಂ
- ಕೊಬ್ಬು- 0.4 ಮಿ.ಗ್ರಾಂ
- ಪೊಟ್ಯಾಷಿಯಂ-304 ಮಿ.ಗ್ರಾಂ
- ಥಯಾಮಿನ್ (ಬಿ1)- 0.33 ಮಿ.ಗ್ರಾಂ
- ರೈಬೋ ಪ್ಲೆವಿನ್ (ಬಿ1)- 0.33 ಮಿ.ಗ್ರಾಂ
ಔಷಧೀಯ ಗುಣಗಳು
1. ಮಲಬದ್ಧತೆ ಇರುವವರು ಸೀತಾಫಲ ಗಿಡದ ಬೇರಿನ ಕಷಾಯಕ್ಕೆ ಅಧಿಕ ಭಾಗ ನೀರು ಬೆರೆಸಿ ಕುಡಿಯಬೇಕು.
2. ಸೀತಾಫಲ ಎಲೆಗಳನ್ನು ಜಜ್ಜಿ ರಸ ತೆಗೆದು ಎಳ್ಳೆಣ್ಣೆಯಲ್ಲಿ ಕುದಿಸಿ, ತಲೆ ಕೂದಲಿಗೆ ಹಚ್ಚಿದರೆ ಹೇನು ಗಳು ನಿವಾರಣೆಯಾಗುತ್ತದೆ.
3. ಸೀತಾಫಲದ ಹಸಿ ಕಾಯಿಯನ್ನು ಒಣಗಿಸಿ ಪುಡಿಮಾಡಿ ಖಾಲಿಹೊಟ್ಟೆಯಲ್ಲಿ ಬೆಳಿಗ್ಗೆ ಹೊತ್ತು ಸೇವಿಸಿದರೆ ಜಂತುಹುಳುಗಳು ನಿವಾರಣೆಯಾಗುತ್ತದೆ.
4. ಕಾಯನ್ನು ಕುಟ್ಟಿ ಪುಡಿಮಾಡಿ ಮಜ್ಜಿಗೆಯೊಂದಿಗೆ ಸೇವಿಸಿದರೆ ಅತಿಸಾರ ನಿಯಂತ್ರಿಸ ಲ್ಪಡುತ್ತದೆ. ತಂಪು ಗುಣವುಳ್ಳ ಸೀತಾಫಲದ ಆಸಿಡಿಟಿಯನ್ನು ಕಡಿಮೆ ಮಾಡುತ್ತದೆ. ರಕ್ತಹೀನತೆ ಇರುವವರು ಸೀತಾಫಲದ ಹಣ್ಣಿನ ಸೇವನೆ ಅಗತ್ಯವಾದುದು.
English summary : Custardapples contain enemies of oxidants like Nutrient C, which assists with battling free radicalsin our body. It is likewise high in potassium and magnesium that secures our heartfrom cardiovascular illness. Not just that, it additionally controls ourblood pressure. Custard apples contain Nutrient A, which keeps your skin and hairhealthy.
ಸುದ್ದಿದಿನ.ಕಾಂ|ವಾಟ್ಸಾಪ್|9980346243