/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ದಾವಣಗೆರೆ | ಗ್ರಾಹಕರ ಮೇಳ : ಮೇಳದಲ್ಲಿ 21 ಕೋಟಿವರೆಗು ಜನತೆಗೆ ಸಾಲ ನೀಡುವ ಗುರಿ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

Published

on

ಸುದ್ದಿದಿನ,ದಾವಣಗೆರೆ : ಗ್ರಾಹಕರು ಬ್ಯಾಂಕ್‍ಗಳಲ್ಲಿ ವಿವಿಧ ಬಗೆಯ ಸಾಲಗಳನ್ನು ಪಡೆದು ಅದನ್ನು ಉದ್ದೇಶಿತ ಕಾರ್ಯಗಳಿಗೆ ಬಳಸಿ ಸಕಾಲದಲ್ಲಿ ಸಾಲ ಮರುಪಾವತಿ ಮಾಡವ ಮೂಲಕ ಬ್ಯಾಂಕ್‍ಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ಕೆನರಾ ಬ್ಯಾಂಕ್, ಲೀಡ್ ಬ್ಯಾಂಕ್ ಕಚೇರಿ ದಾವಣಗೆರೆ ಇವರ ವತಿಯಿಂದ ತೋಗಟವೀರ ಸಮುದಾಯ ಭವನದಲ್ಲಿ ಅ.4 ರಂದು ಏರ್ಪಡಿಸಲಾಗಿದ್ದ ಗ್ರಾಹಕರೆಡೆಗೆ ಒಂದು ಹೆಜ್ಜೆ…‘ಗ್ರಾಹಕರ ಮೇಳ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೇಳದಲ್ಲಿ 1400 ಕ್ಕೂ ಹೆಚ್ಚು ಜನರಿಗೆ ರೂ. 21 ಕೋಟಿವರೆಗೂ ಸಾಲ ನೀಡುವ ಗುರಿ ಹೊಂದಲಾಗಿದೆ. ಗ್ರಾಹಕರು ಪಡೆದ ಸಾಲಗಳನ್ನು ಸದ್ಬಳಕೆ ಮಾಡಿಕೊಂಡು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡಿ ಬ್ಯಾಂಕ್‍ನೊಂದಿಗೆ ಉತ್ತಮ ವ್ಯವಹಾರದೊಂದಿಗೆ ಬಾಂಧವ್ಯ ಕಾಪಾಡಿಕೊಳ್ಳಬೇಕು ಎಂದರು.

ಆರ್ಥಿಕ ಸೇರ್ಪಡೆಯಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ ಬ್ಯಾಂಕ್ ವಹಿವಾಟು ಹೆಚಾಗುತ್ತಿದೆ. ಬ್ಯಾಂಕುಗಳು ವಿವಿಧ ಯೋಜನೆಗಳಡಿ ಮಹಿಳೆಯರೂ ಸೇರಿದಂತೆ ಎಲ್ಲ ವರ್ಗದವರಿಗೆ ಹಲವಾರು ಉದ್ದೇಶಗಳಿಗೆ ಸಾಲಗಳನ್ನು ನಿಡುತ್ತಿದ್ದು, ಗ್ರಾಹಕರ ಉತ್ತಮ ಪ್ರತಿಕ್ರಿಯೆ ಹಾಗೂ ಬ್ಯಾಂಕುಗಳಿಂದ ಹೆಚ್ಚಿನ ಸೇವೆಗಳನ್ನು ನಿರಿಕ್ಷಿಸುತ್ತೇನೆ ಎಂದು ಹೇಳಿದರು.

ಜಿಲ್ಲಾ ಕೆನರಾ ಬ್ಯಾಂಕ್ ಕ್ಷೇತ್ರೀಯ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಹೆಚ್.ರಘುರಾಜ ಮಾತನಾಡಿ, ಬ್ಯಾಂಕುಗಳು ಸಾಲ ನೀಡಲು ಸಿದ್ದವಾಗಿವೆ ಎಂಬುದನ್ನು ಗ್ರಾಹಕರಿಗೆ ತಿಳಿಸಲು ಕೇಂದ್ರ ಸರ್ಕಾರವು ಎಲ್ಲಾ ಜಿಲ್ಲೆಗಳಲ್ಲಿಯೂ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಗ್ರಾಹಕರು ಈ ಮೇಳಗಳ ಮೂಲಕ ವಿವಿಧ ಸಾಲಗಳ ಕುರಿತು ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಬಾರ್ಡ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ರವೀಂದ್ರ.ವಿ ಮಾತನಾಡಿ, ಗ್ರಾಹಕ ಮೇಳ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಕ್ಕಾಗಿ ಕೆನರಾ ಬ್ಯಾಂಕ್ ವ್ಯವಸ್ಥಾಪಕರಿಗೆ ವಿಶೇಷ ವಂದನೆಗಳು. ಗ್ರಾಹಕರು ಈ ಅವಕಾಶವನ್ನು ಬಳಸಿಕೊಂಡು ಸಾಲವನ್ನು ಪಡೆದು ಸದುಪಯೋಗ ಪಡೆದುಕೊಳ್ಳಬೇಕು. ನಬಾರ್ಡ್ ವತಿಯಿಂದ ಸಾಮಾನ್ಯ ವರ್ಗದರಿಗೆ ಶೇ.25, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.33 ಸಬ್ಸಿಡಿ ಹಾಗೂ ಕುರಿ-ಮೇಕೆ ಸಾಕಲು ಎಲ್ಲಾ ವರ್ಗದವರಿಗೆ ಶೇ.25 ಸಬ್ಸಿಡಿ ನೀಡಲಾಗುತ್ತಿದೆ. ಆಹಾರ ಸಾಮಗ್ರಿಗಳನ್ನು ಶೇಕರಣೆ ಮಾಡಲು ಗೊದಾಮುಗಳನ್ನು ಕಟ್ಟಲು ರೂ. 3 ಕೋಟಿ ವರೆಗೆ ಸಾಲ ನೀಡುತ್ತಿದ್ದು, ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ರೂ.1 ಕೋಟಿವರೆಗೂ ಸಬ್ಸಿಡಿ ಸಿಗಲಿದೆ. ಸಾಮಾನ್ಯ ವರ್ಗದವರಿಗೆ ರೂ.75 ಲಕ್ಷದವರೆಗೆ ಸಬ್ಸಿಡಿ ಸಿಗಲಿದೆ ಎಂದು ಮಾಹಿತಿ ನೀಡಿದರು.

ಎಸ್.ಬಿ.ಐ ರೀಜನಲ್ ಮ್ಯಾನೇಜರ್ ರಾಜೇಶ್.ಡಿ ಮಾತನಾಡಿ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಎಸ್‍ಬಿಐ ಶಾಖೆಗಳು ಹೆಚ್ಚಾಗಿದ್ದು, ಅವುಗಳಲ್ಲಿ ಯಾವ ರೀತಿಯ ಸಾಲಗಳು ಸಿಗುತ್ತವೆ ಎಂಬುದನ್ನು ಈ ಮೇಳದಲ್ಲಿ ಮಾಹಿತಿ ನೀಡಲಾಗುತ್ತಿದೆ. ನಮ್ಮಲ್ಲಿ ಗ್ರಾಹಕರಿಗೆ ಸಾಲ ನೀಡಲು ಯಾವುದೇ ನಿರ್ಬಂಧಗಳಿಲ್ಲ. ತಮ್ಮ ಹತ್ತಿರದ ಶಾಖೆಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆಯಬಹುದು ಎಂದ ಅವರು ಗ್ರಾಹಕರು ಈ ಮೂರು ದಿನಗಳ ಗ್ರಾಹಕರ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ರೀಜನಲ್ ಮ್ಯಾನೇಜರ್ ಶಂಕರ್ ಕನವಳ್ಳಿ ಮಾತನಾಡಿ, ಬ್ಯಾಂಕುಗಳಲ್ಲಿನ ಸಾಲಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ 65 ಶಾಖೆಗಳಿವೆ ಹಾಗೂ ನಗರದಲ್ಲಿ 07 ಪ್ರಮುಖ ಶಾಖೆಗಳಿವೆ. ಗ್ರಾಹಕರು ತಮಗೆ ಹತ್ತಿರವಾಗುವ ಶಾಖೆಗಳಲ್ಲಿ ಕೃಷಿ, ಸ್ವ-ಸಹಾಯ ಸಂಘಗಳು ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಸಾಲ ಪಡೆಯಬಹುದಾಗಿದೆ ಎಂದರು.

ಸಿಂಡಿಕೇಟ್ ಬ್ಯಾಂಕ್ ರೀಜನಲ್ ಮ್ಯಾನೇಜರ್ ನವೀನ್‍ಕುಮಾರ್. ಎನ್ ಮಾತನಾಡಿ, ಪ್ರತಿಯೊಂದು ಬ್ಯಾಂಕ್‍ಗಳಲ್ಲಿ ಗ್ರಾಹಕರಿಗೆ ಹೊಂದುವಂತೆ ರೂ. 5 ಸಾವಿರದಿಂದ ರೂ. 1 ಕೋಟಿಯವರೆಗೆ ಸಾಲವನ್ನು ನೀಡಲಾಗುತ್ತದೆ. ಮನೆ, ಶೈಕ್ಷಣಿಕ, ಕೃಷಿ, ಉದ್ಯಮ, ಸಣ್ಣ, ಅತಿ ಸಣ್ಣ ಕೈಗಾರಿಕೆ ಸೇರಿದಂತೆ ಪ್ರತಿಯೊಂದು ಉದ್ಯಮಕ್ಕೂ ಬ್ಯಾಂಕ್‍ಗಳು ಸಾಲ ನೀಡುತ್ತಿವೆ. ಗ್ರಾಹಕರು ಈ ಸೌಲಭ್ಯಗಳ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಬೆಂಗಳೂರು ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಮಹಾ ಪ್ರಬಂಧಕ ಎನ್. ಲಕ್ಷ್ಮೀನಾರಾಯಣ ಮಾತನಾಡಿ, ವಿವಿಧ ಬ್ಯಾಂಕ್‍ಗಳಲ್ಲಿ ವಿವಿಧ ರೀತಿ ಸಾಲ ಸೌಲಭ್ಯಗಳಿವೆ. ಈ ಸಾಲ ಸೌಲಭ್ಯಗಳ ಬಗ್ಗೆ, ಅದಕ್ಕೆ ಬೇಕಾಗುವ ಅಗತ್ಯ ದಾಖಲಾತಿಗಳ ಕುರಿತು ಜನರಿಗೆ ಮಾಹಿತಿ ನೀಡುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬ್ಯಾಂಕ್‍ನ ಸಬ್ಸಿಡಿ, ವಿಮೆಗಳ ಕುರಿತು ಸುದೀರ್ಘವಾಗಿ ಮೂರು ದಿನಗಳ ಕಾಲ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತಿದೆ. ಮಾಹಿತಿ ಪಡೆದು ಸಾಲ ಪಡೆದು ನಿರ್ದಿಷ್ಟ ಉದ್ದೇಶಗಳಿಗೆ ಬಳಸುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.

ಮೇಳದಲ್ಲಿ ಆಧಾರ್ ಸೇವೆಗಳ ಕೌಂಟರ್‍ನ್ನು ಸಹ ತೆರೆಯಲಾಗಿದ್ದು, ಸಾರ್ವಜನಿಕರು ಆಧಾರ್‍ಗೆ ಸಂಬಂಧಿಸಿದ ತಿದ್ದುಪಡಿ ಇತರೆ ಬದಲಾವಣೆ ಇದ್ದಲ್ಲಿ ಇಲ್ಲಿ ಮಾಡಿಸಿಕೊಳ್ಳಬಹುದು. ಇದೇ ಸಂದರ್ಭದಲ್ಲಿ ಅರ್ಹ ಗ್ರಾಹಕರಿಗೆ ವೇದಿಕೆ ಮೇಲಿದ್ದ ಗಣ್ಯರು ಸಾಂಕೇತಿಕವಾಗಿ ಸಾಲಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶೃತ ಡಿ. ಶಾಸ್ತ್ರಿ ಸೇರಿದಂತೆ ವಿವಿಧ ಬ್ಯಾಂಕ್ ಸಿಬ್ಬಂದಿ ವರ್ಗದವರು ಗ್ರಾಹಕರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version