ಸಿನಿ ಸುದ್ದಿ

ಖ್ಯಾತ ನಟನ ಪತ್ನಿಗೆ ಸಮಾಜಿಕ ಜಾಲತಾಣದಲ್ಲಿ ಕಿರುಕುಳ !

Published

on

ಸುದ್ದಿದಿನ ಡೆಸ್ಕ್: ಇಡೀ ಸ್ಯಾಂಡಲ್ವುಡ್ ಬೆಚ್ಚಿ ಬೀಳಿಸುವ ಸುದ್ದಿಯೊಂದು ವರದಿಯಾಗಿದೆ. ಕೆಲವು ದುರುಳರು ಖ್ಯಾತ ನಟನ ಪತ್ನಿಯ ಮಾನಕ್ಕೆ ದಕ್ಕೆ ತರುವಂಥ ಕಾರ್ಯ ಮಾಡಿದ್ದಾರೆ.

ಹೌದು, ಖ್ಯಾತ ನಟನ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಅತೀ ಕೀಳುಮಟ್ಟದ ಶಬ್ಧಗಳಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಫೇಸ್ಬುಕ್ನಲ್ಲಿ ಖ್ಯಾತ ನಟರೊಬ್ಬರ ಪತ್ನಿ ಗೌರವಕ್ಕೆ ಧಕ್ಕೆ ತರುವ ಪೋಸ್ಟ್‍ಗಳನ್ನು ಕಿಡಿಗೇಡಿಗಳು ಹಾಕುತ್ತಿದ್ದು, ಸದ್ಯ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಖ್ಯಾತನ ಪತ್ನಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಆರೋಪಿ ತನ್ನ ಫೋಟೋ ಜೊತೆ ನಟ ಪತ್ನಿಯ ಫೋಟೊ ಎಡಿಟ್ ಮಾಡಿ ಹಾಕಿದ್ದಾನೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಗೆ ನಟನ ಪತ್ನಿ ದೂರು ನೀಡಿದ್ದಾರೆ.

 

 

Leave a Reply

Your email address will not be published. Required fields are marked *

Trending

Exit mobile version