ಸಿನಿ ಸುದ್ದಿ
ಡಿ ಬಾಸ್ ‘ಕುರುಕ್ಷೇತ್ರ’ ಸದ್ಯದಲ್ಲೇ ತೆರೆಗೆ..!
ಸುದ್ದಿದಿನ ಡೆಸ್ಕ್ : ದಚ್ಚು ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ತಮ್ಮ ಡಿ ಬಾಸ್ ಅಭಿನಯದ ಚಿತ್ರ ಕುರುಕ್ಷೇತ ಯಾವಾಗ ಬಿಡುಗಡೆ ಆಗುತ್ತೆ ಅಂತ ಕಾದು ಕುಳಿತಿದ್ದಾರೆ. ಅಭಿಮಾನಿಗಳ ಕಾತರ, ನಿರೀಕ್ಷೆಗೆ ಸದ್ಯದಲ್ಲೇ ತೆರೆ ಬೀಳಲಿದೆ.
ಬಹುನಿರೀಕ್ಷಿತ ದರ್ಶನ ತೂಗುದೀಪ ಅಭಿನಯದ ಕುರುಕ್ಷೇತ್ರದ ಡಬ್ಬಿಂಗ್ ಪೂರ್ಣಗೊಳ್ಳುತ್ತಿದ್ದು, ಕೆಲವೊಂದು ಸೀನ್ ಗಳ ಶೂಟಿಂಗ್ ಮುಗಿಯುವುದು ಬಾಕಿ ಇದೆ. ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ. ಇದಕ್ಕೂ ಮೊದಲು ಜುಲೈನಲ್ಲಿ ಆಡಿಯೋ ಲಾಂಚ್ ಆಗಲಿದೆ.
ಚಿತ್ರದಲ್ಲಿ ಸ್ಯಾಂಡಲ್ ವುಡ್ ಘಟಾನುಘಟಿ ನಟರು ಬಣ್ಣ ಹಚ್ಚಿದ್ದು, ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ, ರಾಕ್ ಲೈನ್ ವೆಂಕಟೇಶ, ಮೆಘನಾರಾಜ್, ಹರಿಪ್ರಿಯ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ. ಬಾಹುಬಲಿ ಖ್ಯಾತಿಯ ಸಾಲೋಮನ್ ಚಿತ್ರಕ್ಕೆ ಸ್ಟಂಟ್ ಡೈರೆಕ್ಟ್ ಮಾಡಿದ್ದಾರೆ.