ರಾಜಕೀಯ

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಭಾರೀ ಸಿದ್ದತೆ

Published

on

ಸುದ್ದಿದಿನ,ಬೆಂಗಳೂರು : ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿ ತಿಂಗಳೂಗಳೆ ಕಳೆದಿದ್ದರೂ ಇನ್ನು ಅಧಿಕೃತವಾಗಿ ಅವರ ಪದಗ್ರಹಣ ಮಾತ್ರ ನಡೆಯದೇ ಮುಂದುಡುತ್ತಲೇ ಬರಲಾಗುತ್ತಿದೆ. ಆದರೆ ಕೊನೆಗೂ ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸುವ ಮೂಲಕ ಪದಗ್ರಹಣಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.

ಕೆಪಿಸಿಸಿ ನೂತನ ಕಟ್ಟಡದಲ್ಲಿ ಜುಲೈ 2 ಕ್ಕೆ ಪದಗ್ರಹಣಕ್ಕೆ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದ್ದು, ಏಕಕಾಲಕ್ಕೆ 28 ಸಾವಿರ ಲೈಬ್ ಸ್ಕ್ರೀನಿಂಗ್ ಅಳವಡಿಕೆ ಮಾಡಿ ಕಾರ್ಯಕರ್ತರಿಗೆ ಪದಗ್ರಹಣ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ.

ಇನ್ನು ಲೈವ್ ಸ್ಕ್ರೀನಿಂಗ್ ನಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಪ್ರತ್ಯೇಕ ವ್ಯವಸ್ಥೆಗೂ ಕಾಂಗ್ರೆಸ್ ಮುಂದಾಗಿದ್ದು, ಅದಕ್ಕಾಗಿ ಗ್ಲೋಬಲ್ ಕಾಲೇಜು ಮೈದಾನದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಲಲಾಗಿದೆ.

ಕೊರೋನಾ ಕಾರಣದಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪದಗ್ರಹಣಕ್ಕ ತಡೆ ಒಡ್ಡಲಾಗಿತ್ತು, ಹಾಗೂ ಕಾರ್ಯಕ್ರಮವನ್ನು ಮುಂದುಡಲಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version