ದಿನದ ಸುದ್ದಿ

‘ನಡೆದಾಡುವ ದೇವರ’ ಆರೋಗ್ಯ ವಿಚಾರಿಸಿದ ಡಿ.ಕೆ.ಶಿವಕುಮಾರ್

Published

on

ಸುದ್ದಿದಿನ ಡೆಸ್ಕ್ : ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ‘ನಡೆದಾಡುವ ದೇವರು’ ಸಿದ್ದಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳನ್ನ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶಿವ ಒಳ್ಳೆಯದು ಮಾಡಿದ್ದಾನೆ. ಒಳ್ಳೆಯದು ಮಾಡುತ್ತಾನೆ. ನನ್ನ ಆಯುಷ್ಯ ಕೂಡ ನಿಮಗೇ ಸಿಗಲಿ. ಇನ್ನೂ ಹತ್ತಾರು ವರ್ಷ ನಿಮ್ಮ ಮಾರ್ಗದರ್ಶನ ಎಲ್ಲರಿಗೂ ಲಭ್ಯವಾಗುವಂತಾಗಲಿ ಅಂತ ಶ್ರೀಗಳಲ್ಲಿ ಹರಕೆ ಮಾಡಿಕೊಂಡಿದ್ದಾರೆ.

ಶಿವನ ಕೃಪೆಯಿಂದ ಶ್ರೀಗಳು ಚೇತರಿಸಿಕೊಂಡಿದ್ದು, ಯಾವ್ದೇ ಆತಂಕಕ್ಕೆ ಕಾರಣಗಳಿಲ್ಲ. ರೇಲಾ ಆಸ್ಪತ್ರೆ ವೈದ್ಯರು ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ಶ್ರೀಗಳು ಮರಳಲಿದ್ದಾರೆ. ಅವರಿಗೆ ವಿಶ್ರಾಂತಿ ಅಗತ್ಯವಿರುವುದರಿಂದ ಭಕ್ತರು ಅವರ ಭೇಟಿಯನ್ನು ಸ್ವಯಂ ನಿಯಂತ್ರಿಸಿ ಕೊಳ್ಳುವುದು ಒಳಿತು ಅಂತ ವಿನಂತಿ ಮಾಡಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version