ರಾಜಕೀಯ

ದಲಿತ ದೌರ್ಜನ್ಯ ತಡೆ ಕಾಯಿದೆ ದುರ್ಬಲ ; ರಾಜ್ಯವ್ಯಾಪಿ ಹೋರಾಟ | ಡಿ.ಎಸ್. ವೀರಯ್ಯ

Published

on

ಸುದ್ದಿದಿನ, ಬೆಂಗಳೂರು | ಮೈತ್ರಿ ಸರ್ಕಾರ ಸಂಪೂರ್ಣ ವಾಗಿ ದಲಿತ ವಿರೋಧಿಯಾಗಿದೆ. ದಲಿತರಿಗೆ ದ್ರೋಹ ಬಗೆಯುತ್ತಿದ್ದಾರೆ. ಸಿದ್ದರಾಮಯ್ಯ ದಲಿತ, ಹಿಂದುಳಿದ ವರ್ಗಗಳ ಹೆಸರು ಹೇಳಿಕೊಂಡು ಅಧಿಕಾರ ನಡೆಸಿದ್ರು.ಈಗ ಮತ್ತೆ ಜೆ ಡಿಎಸ್ ಗೆ ಬೆಂಬಲ ಕೊಟ್ಟಿದೆ‌ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಎಸ್ ಮೋರ್ಚಾ ಅಧ್ಯಕ್ಷ ಎಸ್ ಎಸ್ ವೀರಯ್ಯಬಿಜೆಪಿ ಕಚೇರಿಯಲ್ಲಿ ನಡೆಸಿದ‌ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದ್ದಾಗ ಒಬ್ಬ ನೌಕರ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ್ದ.ಆದರೆ ಕೋರ್ಟ್ ನಲ್ಲಿ ಸರಿಯಾಗಿ ವಾದ ಮಂಡಿಸದೆ ದಲಿತರ ವಿರೋಧಿ ಯಾಗಿ ತೀರ್ಪು ನೀಡಿತ್ತು. ಹೀಗಾಗಿ ಸುಗ್ರೀವಾಜ್ಞೆ ತಂದ್ರು, ಅದು ರಾಷ್ಟ್ರಪತಿ ಬಳಿ ಹೋಯ್ತು. ಅವರು ಅಧಿಕಾರಿಗಳಿಂದ ಶಿಪಾರಸ್ಸು ಪಡೆದುಕೊಂಡರು.
ನಾವು ನಮ್ಮ ನಾಯಕ ಕಡೆಯಿಂದಲೂ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿತು. ರಾಷ್ಟ್ರಪತಿಯವರು ಅದಕ್ಕೆ ಅಂಕಿತ ಹಾಕಿದ್ರು. ಆದ್ರೆ ರಾಜ್ಯ ಸರ್ಕಾರ ಆ ಬಗ್ಗೆ ಈ ವರೆಗೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಇದು ದಲಿತ ವಿರೋಧಿ ಸರ್ಕಾರ ಎಂದು ಡಿ ಎಸ್ ವೀರಯ್ಯ ವಾಗ್ದಾಳಿ ನಡೆಸಿದರು.

ದಲಿತರ ಮೇಲಿನ ದೌರ್ಜನ್ಯ ತಡೆ ಕಾಯಿದೆಯನ್ನೂ ಕೋರ್ಟ್ ದುರ್ಬಲಗೊಳಿಸಿತು. ಆದ್ರೆ ಕೂಡಲೆ ಮೋದಿ ಅವರು ಸುಗ್ರೀವಾಜ್ಞೆ ತಂದು ದಲಿತರ ಹಿತ ಕಾಯೋ ಕೆಲಸ ಮಾಡಿದ್ರು.ಕೆವಲ 15 ದಿನಗಳಲ್ಲಿ ನಿರ್ಧಾರ ತೆಗೆದುಕೊಂಡ್ರು. ಆದ್ರೆ ಆ ಬಗ್ಗೆ ಕಾಂಗ್ರೆಸ್ ತುಟಿ ಬಿಚ್ಚಲಿಲ್ಲ, ಕೇಂದ್ರ ಸರ್ಕಾರ ಏನು ಮಾಡುತ್ತೋ ನೋಡೋಣ ಅಂತ ಕಾಯುತ್ತಿದ್ರು. ಇದು ಕಾಂಗ್ರೆಸ್ ನ ದಲಿತ ವಿರೋಧಿ ಅಂತ ಸಾಬೀತು ಮಾಡಿದೆ. ರಾಜ್ಯ ಸರ್ಕಾರ ಈ ಕೂಡಲೆ ರಾಷ್ಟ್ರಪತಿಗಳು ಹಾಕಿರುವ ಅಂಕಿತ ಜಾರಿ ಮಾಡಬೇಕು. ಇಲ್ಲ ಅಂದ್ರೆ ರಾಜ್ಯ ವ್ಯಾಪಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.

ಸುದ್ದಿದಿನ‌.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version