ಸಿನಿ ಸುದ್ದಿ
ಮೀನುಗಾರನ ಮಕ್ಕಳ ಓದಿಗೆ ಮೊಸಂಬಿ ಜೂಸ್ ಮಾರಿದ ‘ಟಗರು ಡಾಲಿ ಧನಂಜಯ್’..!
ಸುದ್ದಿದಿನ ಡೆಸ್ಕ್ | ಕಳೆದವಾರ ಉದಯ ವಾಹಿನಿಯ ಸದಾ ನಿಮ್ಮೊಂದಿಗೆಯ ಸಂಚಿಕೆಯಲ್ಲಿ ಎಲೆಕ್ಟ್ರಿಕ್ ಶಾಕ್‍ನಿಂದಾಗಿ ತನ್ನ ಎರಡು ಕೈ ಹಾಗು ಒಂದು ಕಾಲು ಕಳೆದುಕೊಂಡಿದ್ದ ನಾಗೇಶ್‍ಗೋಸ್ಕರ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಬೇಲ್‍ಪೂರಿ,ಪಾನಿಪೂರಿ,ಮಸಾಲಪೂರಿಯನ್ನುಮಾರಿ ಅವರಿಗೆ ಆಸರೆಯಾಗಿದ್ದರು.
ಈ ವಾರದ ಸಂಚಿಕೆ ಮತ್ತಷ್ಟು ಕುತುಹಲಕಾರಿಯಾಗಿದೆ. ದೋಣಿಹತ್ತಿ ಮೀನುಹಿಡಿದು ಜೀವನ ಸಾಗಿಸುತ್ತಿದ್ದ ಮನೆಯ ಯಜಮಾನ ರವಿ ಸ್ಟ್ರೋಕ್ ನಿಂದಾಗಿ ಬಲಗೈ ಸ್ವಾದೀನ ಕಳೆದುಕೊಂಡಿರುವುದರಿಂದ ತನ್ನ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಆದರೆ ಅವರ ಇಬ್ಬರು ಹೆಣ್ಣುಮಕ್ಕಳೇ ತಂದೆಯ ಹಾಗೆ ಬೆಳಗಿನ ಜಾವ ಐದುಗಂಟೆಗೆ ಕಬಿನಿ ಹಿನ್ನೀರಿನಲ್ಲಿ ಮೀನುಹಿಡಿದು ಮಾರಿ ಅದರಿಂದ ಬಂದ ಹಣದಿಂದ ತಂದೆಯ ಚಿಕಿತ್ಸೆ ಮತ್ತು ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅದರ ಜೊತೆಗೆ ತಮ್ಮಿಬ್ಬರ ವಿದ್ಯಾಭ್ಯಾಸವನ್ನು ಬಿಡದೆ ಸಂಸಾರವನ್ನು ನಡೆಸುತ್ತಾಬಂದಿದ್ದಾರೆ.
ಈಗ ಕುಟುಂಬದ ನಿರ್ವಹಣೆಯ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಆ ಮಕ್ಕಳಿಗೆ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಇಂಥಹ ಕುಟುಂಬಕ್ಕೆ ಸಹಾಯ ಹಸ್ತನೀಡಲು ಈ ವಾರದ “ಸದಾ ನಿಮ್ಮೊಂದಿಗೆ” ಸಂಚಿಕೆಯಲ್ಲಿ ಟಗರು ಖ್ಯಾತಿಯ “ಡಾಲಿ ಧನಂಜಯ್” ಜನಸಾಮಾನ್ಯರಲ್ಲಿ ಸಾಮಾನ್ಯರಂತೆ ಕೆಲಸಮಾಡಿ ಸಂಕಷ್ಟದಲ್ಲಿರುವ ರವಿ ಕುಟುಂಬಕ್ಕೆ ಕೈ ಜೋಡಿಸಿದ್ದಾರೆ.
ಎನ್ ಆರ್ ಕಾಲೋನಿಯ ಬಸ್ ನಿಲ್ದಾಣದಬಳಿಯಲ್ಲಿ ಮೂಸಂಬಿ ಜ್ಯೂಸ್ ಮಾರುತ್ತಾ ಹೆಲ್ತ್‍ಟಿಪ್ಸ್ ಕೊಡುತ್ತಾ ಡಾಲಿ ಧನಂಜಯ್ ಹಣವನ್ನು ಸಂಗ್ರಹಿಸಿ ರವಿ ಮಕ್ಕಳ ವಿದ್ಯಾಭ್ಯಾಸ ಮುಂದುವರೆಸಲು ಕೈ ಜೋಡಿಸಿದ್ದಾರೆ.
ಡಾಲಿ “ಧನಂಜಯ್” ಸಂಗ್ರಹಿಸಿ ರವಿ ಕುಟುಂಬಕ್ಕೆ ಕೊಟ್ಟ ಹಣವೆಷ್ಟು” ಎಂಬುದು ಇದೇ ಭಾನುವಾರ ರಾತ್ರಿ 9ಕ್ಕೆ “ಸದಾ ನಿಮ್ಮೊಂದಿಗೆ” ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401