ದಿನದ ಸುದ್ದಿ
ಡಬ್ಕೆ ಡ್ಯಾನ್ಸ್ ಎಂಬ ಹೊಸ ಸವಾಲು
ವಿರಾಟ್ ಕೊಹ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಕಿದ ಫಿಟ್‌ನೆಸ್ ಸವಾಲಿನಿಂತೆ ಲೆಬನಾನ್ (ಸಿರಿಯಾ ಗಡಿಯಲ್ಲಿನ ದೇಶ) ನಾಗರಿಕರು ಒಂದು ಸವಾಲು ಹಾಕಿದ್ದಾರೆ. ಅದರ ಹೆಸರು ಡಬ್ಕೆ ಡ್ಯಾನ್ಸ್.
ಐದಾರು ಮಂದಿ ಕೈ ಹಿಡಿದುಕೊಂಡು ಆ ಗುಂಪಿನ ನಾಯಕ ಒಂದು ಕರ್ಚೀಫ್ ಹಿಡಿದು, ಕಾಲಿನಲ್ಲೇ ಬ್ಯಾಲೆನ್ಸ್ ಮಾಡುತ್ತಾ ಆಡುವ ನೃತ್ಯ ಶೈಲಿ ಇದು. ಲೆಬನಾನ್‌ನ ಮದುವೆ ಸಮಾರಂಭಗಳಲ್ಲಿ ಡಬ್ಕೆ ಡ್ಯಾನ್ಸ್ ತುಂಬ ಫೇಮಸ್ಸಂತೆ.
ಅಂದಹಾಗೆ ಡಬ್ಕೆ ಎಂದರೆ ಒಂದು ಅರೇಬಿಕ್ ಪದ. ಕಾಲಿನಲ್ಲೇ ವಿವಿಧ ಸಜ್ಞೆಗಳನ್ನು ತೋರುವುದು ಡಬ್ಕೆ ಎಂಬ ಪದದ ಅರ್ಥ. ಅರೇಬಿಕ್ ಪ್ರಪಂಚದಲ್ಲಿ ಭಾರಿ ಮನ್ನಣೆ ಗಳಿಸಿಕೊಂಡಿರುವ ಡಬ್ಕೆ ಡ್ಯಾನ್ಸ್ ಪುರುಷರಿಗಷ್ಟೆ ಸೀಮಿತವಲ್ಲ. ಮಹಿಳೆಯರೂ ಕೂಡ ಡಬ್ಕೆ ಡ್ಯಾನ್ಸ್ ಆಡುವ ವಿಡಿಯೊಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದೀಗ ಲೆಬನಿಗಳು ನೃತ್ಯ ಜಗತ್ತಿಗೆ ಒಂದು ಸವಾಲು ಹಾಕಿದ್ದು, ತಮ್ಮಂತೆ ನೃತ್ಯ ಮಾಡಿ ತೋರಿಸಿ ಎಂದು ತೊಡೆ ತಟ್ಟಿದ್ದಾರೆ. ಅಂದಹಾಗೆ ಈ ನೃತ್ಯ ಸ್ವಲ್ಪ ಕಷ್ಟವೆಂದೇ ಹೇಳಬಹುದು.