ಲೈಫ್ ಸ್ಟೈಲ್
ಪ್ರತಿದಿನ ಮಾಡುವ ಅಡುಗೆ ಬೇಸರವಾಗಿದೆಯಾ ? ಈ ಹೊಸ ರುಚಿ ಮಾಡಿ ನೋಡಿ : ದಾಲ್ ಮಖಾನಿ
‘ದಾಲ್ ಮಖಾನಿ‘ ಮಾಡಲು ಬೇಕಾಗುವ ಪದಾರ್ಥಗಳು
- ಉದ್ದಿನ ಕಾಳು -1/2 ಕಪ್
- ರಾಜ್ ಮಾ- ¼ ಕಪ್
- ಬಿಳಿ ಉದ್ದು – 1 ಟೇಬಲ್ ಸ್ಪೂನ್
- ಕಡಲೆ ಬೇಳೆ- 1 ಟೇಬಲ್ ಸ್ಪೂನ್
- ಈರುಳ್ಳಿ- 2 (ಸಣ್ಣಗೆ ಹೆಚ್ಚಿರಿ)
- ಟೊಮ್ಯಾಟೊ- 3
- ಹಸಿಶುಂಠಿ- ½” ತುಂಡು
- ಬೆಣ್ಣೆ-2 ಟೇಬಲ್ ಸ್ಪೂನ್
- ಅರಿಸಿನಪುಡಿ – ¼ ಟೀ ಸ್ಪೂನ್
- ಮೆಣಸಿನಪಡಿ- ½ ಟೀ ಸ್ಪೂನ್
- ಜೀರಿಗೆ-1/2 ಟೀ ಸ್ಪೂನ್
- ಉಪ್ಪು – ರುಚಿಗೆ ತಕ್ಕಷ್ಟು
- ಧನಿಯಾ- ½ ಟೀ ಸ್ಪೂನ್
- ಎಣ್ಣೆ-1 ಟೇಬಲ್ ಸ್ಪೂನ್
- ಗರಂಮಸಾಲೆ ಪುಡಿ -1/2 ಟೀ ಸ್ಪೂನ್
ಮಾಡುವ ವಿಧಾನ
- ಎಲ್ಲಾ ಬೇಳೆಗಳನ್ನೂ ಬಿಡಿ ಬಿಡಿಯಾಗಿ ನೀರಿನಲ್ಲಿ ತೊಳೆದು 4 ರಿಂದ 6 ಗಂಟೆವರೆಗೆ ನೆನೆಸಿರಿ.
- ಅದೇ ನೀರಿನಲ್ಲಿ ರಾಜ್ ಮಾ ಅನ್ನು ಒಂದು ವಿಷಲ್ ಬರುವವರೆಗೆ ಹಬೆಯಲ್ಲಿ ಬೇಯಿಸಿ.
- ಇದನ್ನು ತಣ್ಣಗಾಗಿಸಿ , ಮುಚ್ಚಳವನ್ನು ತೆಗೆದು, ನಂತರ ಎಲ್ಲಾ ಬಗೆಯ ಬೇಳೆಗಳನ್ನೂ, ಹೆಚ್ಚಿದ ಹಸಿಶುಂಠಿ, ಹಸಿರು ಮೆಣಸಿನಕಾಯಿ, ಸ್ವಲ್ಪ ಎಣ್ಣೆಯನ್ನು ಇದಕ್ಕೆ ಸೇರಿಸಿ.
- ಅಗತ್ಯವಾದರೆ ಸ್ವಲ್ಪ ಅಧಿಕ ನೀರನ್ನು ಸೇರಿಸಿ, ಮತ್ತೆ ಒಂದು ವಿಷಲ್ ಬರುವ ವರೆಗೆ ಮತ್ತೆ ಬೇಯಿಸಿ.
- ಈ ನಡುವೆ, ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಜೀರಿಗೆ, ಹಚ್ಚಿದ ಈರುಳ್ಳಿ ಸೇರಿಸಿ ಬಣ್ಣ ಬರುವವರೆಗೂ ಹುರಿದು, ನಂತರ ಟೊಮ್ಯಾಟೊ ಸೇರಿಸಿ.
- ಇದನ್ನು ಗೊಜ್ಜಿನಂತಾಗುವ ವರೆಗೆ ಕಲಕಿ, ನಂತರ ಮೆಣಸಿನ ಪುಡಿ, ಅರಿಸಿನಪುಡಿ ಸೇರಿಸಿ ಒಲೆಯಿಂದ ಇಳಿಸಿ.
- ಇದನ್ನು ಉಪ್ಪಿನ ಜೊತೆ ಬೆಂದ ಬೆಳೆಗಳಿಗೆ ಸೇರಿಸಿ, ಮೃದುವಾಗಿ ಕಲಕಿರಿ.
- ಹಸಿ ಅಂಶ ಹೋಗುವವರೆಗೆ ಇದನ್ನು ಸಣ್ಣ ಉರಿಯ ಮೇಲೆ ಬೇಯಿಸಿ. ಅಗತ್ಯವಾದರೆ ಇದನ್ನು ಸ್ವಲ್ಪವಾಗಿ ಜಜ್ಜಿರಿ.
- ಒಲೆಯಿಂದ ಇಳಿಸಿ, ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
- ಬೆಣ್ಣೆಯನ್ನು ಕರಗುವವರೆಗೆ ಬಿಸಿಮಾಡಿ, ಗರಂಮಸಾಲೆ ಪುಡಿ ಸೇರಿಸಿ ನಂತರ ಅದನ್ನು ಬೇಳೆಯ ಮೇಲೆ ಸುರಿಯಿರಿ.
- ಮೃದುವಾಗಿ ಬರೆಸಿ, ಚಪಾತಿ ಅಥವಾ ರೊಟ್ಟಿಗಳೊಂದಿಗೆ ಬಡಿಸಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243