ದಿನದ ಸುದ್ದಿ

ದಾವಣಗೆರೆ | ದಲಿತ ಯುವಕನ ಮೇಲೆ ಹಲ್ಲೆ ; ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಡಿ ಎಸ್ ಎಸ್ ನಿಂದ ಪ್ರತಿಭಟನೆ

Published

on

ಸುದ್ದಿದಿನ, ದಾವಣಗೆರೆ : ಜಿಲ್ಲೆಯ ದಾವಣಗೆರೆ ತಾಲೂಕು ಅತ್ತಿಗೆರೆ ಗ್ರಾಮದ ಗಣೇಶ ಎಂಬ ದಲಿತ ಯುವಕನ ಮೇಲಿನ ಹಲ್ಲೆ ಖಂಡಿಸಿ ಇಂದು ನಗರದ ಅಂಬೇಡ್ಕರ್ ವೃತ್ತದ ಬಳಿ  ಡಿಎಸ್ಎಸ್ ಪ್ರತಿಭಟನೆ ನಡೆಸಿತು‌.

ಯುವಕನ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸಲು ಮತ್ತು ಹಲ್ಲೆಗೊಳಗಾದವರ ಮೇಲೆ ಹಾಕಿರುವ ಸುಳ್ಳು ಪ್ರಕರಣವನ್ನು ವಜಾಮಾಡುವಂತೆ ಒತ್ತಾಯಿಸಿ ದಾವಣಗೆರೆ ಜಿಲ್ಲಾ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಉಪ ಅಧೀಕ್ಷಕರಾದ ಬಸರಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊಫೆಸರ್ ಬಿ ಕೃಷ್ಣಪ್ಪ ನವರ ಸ್ಥಾಪಿಸಿದ ಸಂಘಟನೆ) ಪದಾಧಿಕಾರಿಗಳು ಅತ್ತಿಗೆರೆ ಮತ್ತು ಅಣಬೇರು ಗ್ರಾಮಸ್ಥರು ಹಾಗೂ ಕಡ್ಲೆಬಾಳು ಗ್ರಾಮಸ್ಥರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version