ದಿನದ ಸುದ್ದಿ

ಗುಬ್ಬಿ ತಾಲೂಕಿನ ದಲಿತ ಯುವಕರಿಬ್ಬರ ಭೀಕರ ಕೊಲೆ ಸಿಪಿಐಎಂ ಖಂಡನೆ

Published

on

ಸುದ್ದಿದಿನ, ತುಮಕೂರು : ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪೆದ್ದ ಹಳ್ಳಿಯಲ್ಲಿ ಇಬ್ಬರು ದಲಿತ ಯುವಕರ ಬರ್ಬರ ಹತ್ಯೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ)ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.

ಕೂಡಲೇ ಅಪರಾಧಿಗಳನ್ನು ಬಂಧಿಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸಿ ಸಂಘಟನೆಯ ಕಾರ್ಯದರ್ಶಿ ಯು.ಬಸವರಾಜ ಅವರು ಪ್ರಕಟಣೆ ಹೊರಡಿಸಿದ್ದಾರೆ.

ಯುವಕರು ತಪ್ಪು ಮಾಡಿದ್ದಾರೆಂಬ ಕಾರಣ ನೀಡಿ, ಕೊಲೆಗಳ ಸಮರ್ಥನೆಗೆ ಮುಂದಾಗುವುದನ್ನು ಒಪ್ಪಲಾಗದು.ಭೀಕರ ಕೊಲೆಯ ಪರಿಸ್ಥಿತಿಯನ್ನು ಗಮನಿಸಿದರೆ ಅದರ ಹಿಂದೆ ವ್ಯವಸ್ಥಿತ ಸಂಚು ಮತ್ತು ತಂಡ ಇರುವುದು ಕಂಡು ಬರುತ್ತದೆ. ಸಂಚನ್ನು ಭೇಧಿಸಿ ರಾಜ್ಯದ ಜನತೆಗೆ ನಿಜವೇನೆಂದು ತಿಳಿಸಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಕೊಲೆಯಾದ ಕುಟುಂಬಗಳಿಗೆ ತಕ್ಷಣವೇ ಅಗತ್ಯ ಪರಿಹಾರವನ್ನು ಘೋಷಿಸುವಂತೆ ಸಿಪಿಐಎಂ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version