ದಿನದ ಸುದ್ದಿ

ಶಹಾಪುರ : ದಲಿತ ಸೇನೆಯಿಂದ ನಾಳೆ ಬೃಹತ್ ಪ್ರತಿಭಟನೆ

Published

on

ಸುದ್ದಿದಿನ, ಶಹಾಪುರ : ದಲಿತ ಸೇನೆ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ನಾಳೆ ಬೆಳಗ್ಗೆ 10.30ಕ್ಕೆ ಕೃಷಿ ಸಂಶೋಧನಾ ಕೇಂದ್ರ ಭೀಮರಾಯನಗುಡಿ ಕ್ಷೇತ್ರ ಅಧೀಕ್ಷಕರಾದ ದಯಾನಂದ್ ಸಾತಿಹಾಳ ಅವರನ್ನು ಕೂಡಲೇ ಭ್ರಷ್ಟಾಚಾರದ ಆರೋಪದಡಿಅಮಾನತುಗೊಳಿಸಿ ಸೂಕ್ತ ಕಾನೂನಿನ ಕ್ರಮ ಜರುಗಿಸುವಂತೆ ಒತ್ತಾಯಿಸಿ ದಲಿತ ಸೇನೆ ಬೃಹತ್ ಪ್ರತಿಭಟನೆ ನಡೆಸಲಿದೆ.

ನಂತರ ಕೃಷಿ ಸಂಶೋಧನಾ ಕೇಂದ್ರ ಭೀಮರಾಯನಗುಡಿ ಬೀಗಮುದ್ರೆ ಹಮ್ಮಿಕೊಳ್ಳಲಾಗಿದ್ದು ಯಾದಗಿರಿ ಜಿಲ್ಲಾ ಸಮಿತಿಯ ಎಲ್ಲ ಪದಾಧಿಕಾರಿಗಳು ಹಾಗೂ ಶಹಾಪುರ ಸುರಪುರ ವಡಗೇರಾ ಹುಣಸಗಿ ಗುರುಮಿಟ್ಕಲ್ ಹಾಗೂ ಯಾದಗಿರಿ ತಾಲ್ಲೂಕು ಸಮಿತಿಯ ಎಲ್ಲ ಪದಾಧಿಕಾರಿಗಳು ತಪ್ಪದೇ ಭಾಗವಹಿಸಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿ ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಅಶೋಕ ಹೊಸಮನಿ ಹಾಗೂ ದಲಿತ ಸೇನೆ ಶಹಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವು ಆಂದೋಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version