ದಿನದ ಸುದ್ದಿ

ಶಹಾಪುರ | ದಲಿತ ಸೇನೆಯಿಂದ ಪ್ರತಿಭಟನೆ ; ಕೃಷಿ‌‌ ಸಂಶೋಧನಾ ಕೇಂದ್ರಕ್ಕೆ ಬೀಗ

Published

on

ಸುದ್ದಿದಿನ,ಶಹಾಪುರ : ದಲಿತ ಸೇನೆ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಕೃಷಿ ಸಂಶೋಧನಾ ಕೇಂದ್ರ ಭೀಮರಾಯನಗುಡಿ ಕ್ಷೇತ್ರ ಅಧೀಕ್ಷಕರಾದ ದಯಾನಂದ್ ಸಾತಿಹಾಳ ಅವರನ್ನು ಕೂಡಲೇ ಭ್ರಷ್ಟಾಚಾರದ ಆರೋಪದಡಿ ಅಮಾನತುಗೊಳಿಸಿ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ಕೃಷಿ ಸಂಶೋಧನಾ ಕೇಂದ್ರ ಭೀಮರಾಯನಗುಡಿ ಬೀಗಮುದ್ರೆ ಹಮ್ಮಿಕೊಳ್ಳಲಾಯಿತು.

ಈ ಪ್ರತಿಭಟನೆಯ ಘನ ಅಧ್ಯಕ್ಷತೆಯನ್ನು ದಲಿತ ಸೇನೆ ರಾಜ್ಯ ಸಂಘಟನ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಅನಸುಗೂರ ವಹಿಸಿದ್ದರು. ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಅಶೋಕ್, ಹೊಸಮನಿ ಜಿಲ್ಲಾ ಉಪಾಧ್ಯಕ್ಷ ಟಿ ರಂಗನಾಥ್ ಹಾಗು ಬಸವರಾಜ್ ಹಾದಿಮನಿ ಜಿಲ್ಲಾ ಸಂಘಟನಾ ಸಂಚಾಲಕರಾದ ಹಣಮಂತ ಕಟ್ಟಿಮನಿ, ಜಿಲ್ಲಾ ಖಜಾಂಚಿ ಯಾದ ಶರಣಪ್ಪ ಚತುರ್ವೇದಿ ಶಿವು ಆಂದೋಲಾ ತಾಲೂಕು ಪ್ರಧಾನ ಕಾರ್ಯದರ್ಶಿ ಶಹಾಪುರ, ಶಹಾಪುರ ತಾಲ್ಲೂಕು ಅಧ್ಯಕ್ಷರುಗಳು ಹಾಗು ಎಲ್ಲ ಪದಾಧಿಕಾರಿಗಳು ಸುರಪುರ ಅಧ್ಯಕ್ಷರುಗಳು ಹಾಗೂ ಎಲ್ಲ ಪದಾಧಿಕಾರಿಗಳು ಹುಣಸಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬಡಿಗೇರ ತಾಲ್ಲೂಕು ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version