ದಿನದ ಸುದ್ದಿ
ಸಾರಿಗೆ ಸಚಿವರ ಸ್ವಗ್ರಾಮದಲ್ಲೇ ದಲಿತರಿಗೆ ಸ್ಮಶಾನ ಭೂಮಿ ಇಲ್ಲ..!
ಸುದ್ದಿದಿನ ಡೆಸ್ಕ್, : ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕು ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಾಸಿಕ ಸಭೆಯನ್ನು ಸರ್ಕಲ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ನಡೆಸಲಾಯಿತು. ಸಾರಿಗೆ ಸಚಿವ ಡಿ.ಸಿ.ತಮ್ಣಣ್ಣ ಅವರ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಭೂಮಿ ಇಲ್ಲದೆ ಕೆರೆಯ ಏರಿಯ ಮೇಲೆ ಶವಸಂಸ್ಕಾರ ಮಾಡುತ್ತಿದ್ದಾರೆ ಎಂದು ಉಪ ತಹಶೀಲ್ದಾರ್ ರವರಿಗೆ ಮುಖಂಡರು ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಬೇಕು ಎಂದು ತಿಳಿಸಿದರು. ಮೂರ್ತಿ ರವರು ಮಾತನಾಡಿ ಹೋಟೆಲ್ಗಳಲ್ಲಿ ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ ಎಂದು ದೂರಿದರು
ಹಳ್ಳಿಗಳಲ್ಲಿ ಇಂದಿಗೂ ಸಹ ಮುಜರಾಯಿ ದೇವಾಲಯಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶ ನೀಡುತ್ತಿಲ್ಲ ಗೋಡೆ ಮೇಲೆ ದಲಿತರಿಗೆ ಮುಕ್ತ ಪ್ರವೇಶ ಎಂದು ಬರೆಯಲಾಗುವುದು ಅಂತ ಅಧಿಕಾರಿಗಳು ತಿಳಿಸಿದರು.ಸಭೆಯಲ್ಲಿ ಸಬ್ ಇನ್ಸ್ಪೆಕ್ಟರ್ ಅಯ್ಯನಗೌಡ,ಎ,ಎಸ್,ಐ , ಮಂಜುನಾಥ್ ಮುಖಂಡರಾದ ಕಬ್ಬಾಳಯ್ಯ,ಹೊಂಬಯ್ಯ, ಮೂರ್ತಿ,ಮುತ್ತಣ್ಣ,ರಾಜಣ್ಣ, ಯೋಗೇಶ್, ಕುಮಾರ್, ಸ್ವಾಮಿ, ಇತರೆ ಮುಖಂಡರುಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401