ದಿನದ ಸುದ್ದಿ
ದಾವಣಗೆರೆ | ಶಾಮನೂರು ಶಿವಸಂಕರಪ್ಪ ಫಾರ್ಮ್ ಹೌಸ್ ಗೆ ಡಿ ಬಾಸ್ ಭೇಟಿ
ಸುದ್ದಿದಿನ,ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೋವು ಸಾಕಣೆ ಹಾಗೂ ಕುದುರೆ ಸಾಕಣೆ ಕುರಿತು ಮಾಹಿತಿ ಪಡೆಯಲು ಶಾಸಕ, ಮಾಜಿ ಸಚಿವ, ಶಾಮನೂರು ಶಿವಶಂಕರಪ್ಪನವರ ಫಾರ್ಮ್ ಹೌಸ್‍ಗೆ ಭೇಟಿ ನೀಡಿದ್ದಾರೆ.
ಇಂದು ಸಂಜೆ ವರೆಗೆ ವಿವಿಧ ಫಾರ್ಮ್ ಹೌಸ್‍ಗೆ ದರ್ಶನ್ ಭೇಟಿ ನೀಡಿದ್ದು, ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ರಾತ್ರಿ ಎಸ್‍ಎಸ್ ಮನೆಯಲ್ಲಿಯೇ ಊಟ ಮಾಡಿದ್ದಾರೆ. ಇಂದು ದಾವಣಗೆರೆಯಲ್ಲಿಯೇ ವಾಸ್ತವ್ಯ ಹೂಡಲಿದ್ದು, ಬಾಪೂಜಿ ಗೆಸ್ಟ್ ಹೌಸ್‍ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ ಮತ್ತೆ ಕೆಲ ಪ್ರಗತಿಪರ ರೈತರನ್ನು ಡಿ ಬಾಸ್ ಭೇಟಿ ಮಾಡಲಿದ್ದು, ವಿವಿಧ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243