ದಿನದ ಸುದ್ದಿ
ದಾವಣಗೆರೆ | ಬುಳ್ ನಾಗನ ಹತ್ಯೆ : ಮೋಟ್ ಬೆಳ್ ಸೀನ ಸೇರಿದಂತೆ 18 ಆರೋಪಿಗಳ ಬಂಧನ
ಸುದ್ದಿದಿನ, ದಾವಣಗೆರೆ : ರೌಡಿ ಶೀಟರ್ ಬುಳ್ ನಾಗನ ಹತ್ಯೆ ಪ್ರಕರಣ ಬೇದಿಸಿದ ದಾವಣಗೆರೆ ಪೊಲೀಸರು 18 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಇದೇ ತಿಂಗಳ 12 ನೇ ತಾರೀಕಿನಂದು ನಗರದ ಕೆಎಸ್ ಆರ್ ಟಿ ಸಿ ಘಟಕದ ಬಳಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಬುಳ್ಳ ನಾಗನ ಮೇಲೆ
ದಾಳಿಮಾಡಿದ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ರೌಡಿ ಶೀಟರ್ ಅನ್ನು ಕೊಲೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ವಿದ್ಯಾನಗರ ಪೊಲೀಸರು ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಆಲಿಯಾಸ್ ಮೋಟ್ ಬಳ್ ಸೀನಾ, ಸಂತೋಷ್ ಆಲಿಯಾಸ್ ಕಣುಮಾ, ಜಯಕರ್ನಾಟಕ ಜಿಲ್ಲಾದ್ಯಕ್ಷ ನಿಖಿಲ್, ಶಿವಕುಮಾರ್ , ಪರಶುರಾಮ, ಮಂಜ, ಪವನ,ಸುಭಾನಿ, ಮಹಂತೇಶ್ ಸೇರಿದಂತೆ 18 ಜನರ ಬಂಧಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243