ದಿನದ ಸುದ್ದಿ
ದಾವಣಗೆರೆಯ ಈ ನಗರ ಇನ್ನು ‘ಕೊರೊನಾ ಮುಕ್ತ..!’
ಸುದ್ದಿದಿನ,ದಾವಣಗೆರೆ: ಜಾಲಿನಗರದಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ 111 ಕೊರೊನ ಸೋಂಕು ದೃಢಪಟ್ಟಿದ್ದು 4 ಸೋಂಕಿತರು ಮರಣ ಹೊಂದಿದ್ದರು. ಕೊರೊನಾ ಹಾಟ್ ಸ್ಪಾಟ್ ಆಗಿದ್ದ ಇಡೀ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿತ್ತು.
65 ವರ್ಷದ ವೃದ್ಧನಿಂದ ಪ್ರಾರಂಭವಾದ ಸೋಂಕು ಇಡೀ ಪ್ರದೇಶವನ್ನು ಆವರಿಸಿಕೊಂಡಿತ್ತು ಮತ್ತು ವೃದ್ಧ ಸೇರಿದಂತೆ ನಾಲ್ವರನ್ನು ಆಹುತಿ ಪಡೆದಿತ್ತು. ಈಗ ಅಲ್ಲಿನ ಎಲ್ಲಾ ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದು ಕೊರೊನಾ ಮುಕ್ತ ಪ್ರದೇಶ ಆಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243