ರಾಜಕೀಯ
ದಾವಣಗೆರೆ : ಕಾಂಗ್ರೆಸ್ ನಿಂದ ಹೆಚ್.ಬಿ.ಮಂಜಪ್ಪ ಲೋಕಸಭಾ ಅಭ್ಯರ್ಥಿಯಾಗಿ ಘೋಷಣೆ
ಸುದ್ದಿದಿನ ,ದಾವಣಗೆರೆ : ಲೋಕ ಸಭಾ ಕ್ಷೇತ್ರಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹೆಚ್.ಬಿ.ಮಂಜಪ್ಪ ಇವರನ್ನು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಇವರ ಮೇಲುಸ್ತುವಾರಿ ಯಲ್ಲಿ ಅಭ್ಯರ್ಥಿ ಯಾಗಿ ಎ.ಐ.ಸಿ.ಸಿ ಘೋಷಿಸಿದೆ.
ಜಿಲ್ಲೆಯಲ್ಲಿ 1991 ರ ದಿ.ಚನ್ನಯ್ಯ ಒಡೆಯರ್ ನಂತರ ಒಬ್ಬ ಹಿಂದುಳಿದ ವರ್ಗದ ಅಭ್ಯರ್ಥಿ ಗೆ ಶಾಮಾನೂರು ಶಿವಶಂಕರಪ್ಪ ನವರ ಶಿಫಾರಸಿನ ಮೇರೆಗೆ ದಾವಣಗೆರೆ ಲೋಕ ಸಭಾ ಕಣಕ್ಕೆ ಹೆಚ್.ಬಿ.ಮಂಜಪ್ಪ ರನ್ನು ಅಭ್ಯರ್ಥಿ ಯಾಗಿ ಘೋಷಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401