ದಿನದ ಸುದ್ದಿ
ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ಸಾಹೀರಾಬಾನು ಫಾರೂಕಿ
ಸುದ್ದಿದಿನ,ದಾವಣಗೆರೆ : ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡದಾದ ದಾವಣಗೆರೆ ನಗರದ ಪ್ರಸಿದ್ಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈವರೆಗೆ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ ಶಂಕರ.ಶೀಲಿ ಅವರು ವಯೋ ಸಹಜ ನಿವೃತ್ತಿಯಾಗಿದ್ದು, ತೆರವಾದ ಸ್ಥಾನಕ್ಕೆ ಡಾ.ಸಾಹೀರಾಬಾನು ಫಾರೂಕಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಪ್ರೊ.ಭೀಮಣ್ಣ ಸುಣಗಾರ, ಗಿರಿಸ್ವಾಮಿ, ಗುರುಮೂರ್ತಿ, ಧರ್ಮಾನಾಯ್ಕ, ವೀರೇಶ್, ಡಾ.ತಿಪ್ಪಾರೆಡ್ಡಿ, ಆಂಜಿನಪ್ಪ, ಡಾ.ಮಂಜಣ್ಣ ಎಂ, ಡಾ.ಜಕ್ಕವರ ಮಂಜುನಾಥ, ಡಾ. ಸದಾಶಿವ, ಲಕ್ಷ್ಮಣ್ ಬಿ.ಎಚ್, ಡಾ.ನಾರಯಣಸ್ವಾಮಿ, ಡಾ.ತಿರುಮಲ, ಡಾನಾಗರಾಜ್ ಹಾಗೂ ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ನೂತನ ಪ್ರಾಂಶುಪಾಲರಿಗೆ ಅಭಿನಂದನೆ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243