ದಿನದ ಸುದ್ದಿ
ಅಧಿಕಾರಿಗಳ ನಿರ್ಲಕ್ಷ್ಯ; ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲೇ ಓಪನ್ ಆಗಿದೆ ಡ್ರೈನೇಜ್ , ಆಪಾಯ ಕಟ್ಟಿಟ್ಟ ಬುತ್ತಿ..!
ಸುದ್ದಿದಿನ, ದಾವಣಗೆರೆ : ದಾವಣಗೆರೆ ಮಹಾನಗರಪಾಲಿಕೆ ಆವರಣದಲ್ಲಿ ಡ್ರೈನೆಜ್ ಓಪನ್ ಆಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ನಗರಪಾಲಿಕೆಯ ಆವರಣದಲ್ಲಿನ ಕ್ಯಾಂಟೀನ್ ಮುಂದಿರುವ ಡ್ರೈನೇಜ್ ಸುಮಾರು ದಿನಗಳಿಂದ ಓಪನ್ ಆಗಿದೆ. ಆವರಣವು ಜನ ಸಮೂಹದಿಂದ ನಿತ್ಯವೂ ಕೂಡಿರುತ್ತದೆ. ಕ್ಯಾಂಟೀನ್ ಬರುವ ಜನರೂ ಕೂಡ ಹೆಚ್ಚಾಗಿಯೇ ಇರುತ್ತಾರೆ. “ಸುಮಾರು ಒಂದು ವಾರದಿಂದ ಈ ಗುಂಡಿ ಓಪನ್ ಆಗಿದ್ದು ಆಯತಪ್ಪಿ ಯಾರಾದರೂ ಬಿದ್ದರೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ” ಎನ್ನುತ್ತಿದ್ದಾರೆ ಸಾರ್ವಜನಿಕರು.
ಮಹಾನಗರ ಸಭೆಯ ಆವರಣದಲ್ಲೇ ಡ್ರೈನೇಜ್ ಓಪನ್ ಆಗಿದ್ದು, ಸರಿಪಡಿಸಲು ಅಧಿಕಾರಿಗಳು ನಿರ್ಲಕ್ಷವಹಿಸಿದ್ದು, ಇನ್ನು ನಗರದ ಇಂತಹ ಹಲವು ಸಮಸ್ಯೆಗಳನ್ನು ಪರಿಹರಿಸಲು ಎಷ್ಟು ದಿನ ಕಾಯ ಬೇಕು..? ಎಂದು ಸಾರ್ವಜನಿಕರಾದ ಮಹೇಶ್ ಎಂಬುವವರು ‘ಸುದ್ದಿದಿನ’ದ ಮುಂದೆ ಪ್ರಸ್ತಾಪಿಸಿದರು.
- ಓಪನ್ ಆಗಿರುವ ಡ್ರೈನೇಜ್ ಅನ್ನು ಶೀಘ್ರದಲ್ಲೇ ಮುಚ್ಚಿಸಲು ಕ್ರಮ ತೆಗೆದುಕೊಳ್ಳುತ್ತೇವೆ.
| ವಿಶ್ವನಾಥ್ ಪಿ ಮುದ್ದಜ್ಜಿ ,ಕಮೀಷನರ್, ಮಹಾನಗರ ಪಾಲಿಕೆ, ದಾವಣಗೆರೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243