ದಿನದ ಸುದ್ದಿ
ದಾವಣಗೆರೆ | 30 ಕಡೆಗಳಲ್ಲಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ; ನಿಗದಿತ ಸ್ಥಳಗಳಲ್ಲಿಯೇ ಗಣೇಶಮೂರ್ತಿ ವಿಸರ್ಜನೆಗೆ ಮಹಾನಗರಪಾಲಿಕೆ ಸೂಚನೆ
ಸುದ್ದಿದಿನ,ದಾವಣಗೆರೆ : ಗಣೇಶ ಹಬ್ಬದ ಅಂಗವಾಗಿ ಗಣೇಶ ಮೂರ್ತಿ ವಿಸರ್ಜನೆಗೆ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ, ಸೆ. 10, 12 ಮತ್ತು 14 ರಂದು ನಗರದ 30 ಸ್ಥಳಗಳಲ್ಲಿ ಟ್ರ್ಯಾಕ್ಟರ್ ಟ್ರೇಲರ್ ನಿಲ್ಲಿಸುವ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ, ಅಲ್ಲದೆ ಬಾತಿ ಕೆರೆ ಹಾಗೂ ಹದಡಿ ರಸ್ತೆ ಭದ್ರಾ ಚಾನಲ್ ಬಳಿ ಕೃತಕ ಹೊಂಡ ನಿರ್ಮಿಸಲಾಗಿದೆ. ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ನಿಗದಿತ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು ಎಂದು ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಟ್ರೇಲರ್ ನಿಲ್ಲಿಸಲಾಗುವ ಸ್ಥಳಗಳ ವಿವರ ಇಂತಿದೆ. ಬೇತೂರು ರಸ್ತೆ ವೆಂಕಟೇಶ್ವರ ವೃತ್ತ, ಬಂಬೂ ಬಜಾರ್ (ಗಣೇಶ ಹೋಟೆಲ್ ಬಳಿ), ಹಗೆದಿಬ್ಬ ವೃತ್ತ, ದುಗಾಂಬಿಕ ದೇವಸ್ಥಾನ (ಶಿವಾಜಿ ವೃತ್ತ), ಹೊಂಡದ ವೃತ್ತ, ಕಾಯಿಪೇಟೆಯ ಬಸವೇಶ್ವರ ವೃತ್ತ, ಕುರುಬರ ಕೇರಿ, ಡಾಂಗೆ ಪಾರ್ಕ್, ರಾಮ್ ಅಂಡ್ ಕೋ ಸರ್ಕಲ್, ಗಣೇಶ ದೇವಸ್ಥಾನ ಹತ್ತಿರ ಬಾಪೂಜಿ ಶಾಲೆ, ಆಂಜನೇಯ ಬಡಾವಣೆ ಆಂಜನೇಯ ದೇವಸ್ಥಾನ, ವಿದ್ಯಾನಗರದ ಈಶ್ವರ ಪಾರ್ವತಿ ದೇವಸ್ಥಾನ, ವಿನೋಬನಗರ 3ನೇ ಮುಖ್ಯ ರಸ್ತೆ.
ಮಹಾರಾಜಪೇಟೆ ವಿಠಲಮಂದಿರ, ಆವರಗೆರೆ, ಗುಂಡಿ ಮಹದೇವಪ್ಪ ಸರ್ಕಲ್, ನಿಟ್ಟುವಳ್ಳಿ ದುಗಾಂಬಿಕ ದೇವಸ್ಥಾನ, ಹೆಚ್‍ಕೆಆರ್ ಸರ್ಕಲ್, ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತದ ಸಂಜೀವಿನಿ ಆಂಜನೇಯ ದೇವಸ್ಥಾನ, ಕೊಂಡಜ್ಜಿ ರಸ್ತೆ (ಶಿಬಾರ) ಮೈಲಾರಲಿಂಗೇಶ್ವರ ದೇವಸ್ಥಾನ, ಎಸ್‍ಎಸ್ ಲೇಔಟ್ ಬನ್ನಿಮರದ ಹತ್ತಿರ ರಿಂಗ್ ರಸ್ತೆ, ಜಯದೇವ ವೃತ್ತ, ಎಂಸಿಸಿ ಎ ಬ್ಲಾಕ್ ಬಕ್ಕೇಶ್ವರ ಸ್ಕೂಲ್ ಮುಂಭಾಗ ಗಣೇಶ ದೇವಸ್ಥಾನ, ಸರಸ್ವತಿ ಬಡಾವಣೆ ಪಂಚಮುಖಿ ಆಂಜನೇಯ ದೇವಸ್ಥಾನ, ದೇವರಾಜ ಅರಸ್ ಬಡಾವಣೆ ಕೋರ್ಟ್ ಹಿಂಭಾಗ, ಆಂಜನೇಯ ಬಡಾವಣೆ ಬಿಐಇಟಿ ರಸ್ತೆ ಬಾಪೂಜಿ ಬ್ಯಾಂಕ್ ಹತ್ತಿರ, ಡಿಸಿಎಂ ಲೇಔಟ್ ಸರ್ಕಲ್ ಹತ್ತಿರ, ಹಳೇ ಕುಂದುವಾಡ, ಹಾಸಬಾವಿ ವೃತ್ತ, ಶಾಮನೂರು.
ಸಾರ್ವಜನಿಕರು ಮಹಾನಗರಪಾಲಿಕೆ ವತಿಯಿಂದ ನಿಗದಿಪಡಿಸಲಾದ ಸ್ಥಳಗಳಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೂಲಕ ಜಲ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಸಹಕರಿಸಬೇಕು. ಯಾವುದೇ ಸಾರ್ವಜನಿಕ, ಖಾಸಗಿ ಬಾವಿ, ಕೆರೆ, ಕಾಲುವೆ, ಹಳ್ಳ, ಕೊಳ್ಳಗಳಲ್ಲಿ ಗಣೇಶಮೂರ್ತಿ ವಿಸರ್ಜನೆ ಮಾಡುವಂತಿಲ್ಲ, ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243