ರಾಜಕೀಯ
ದಾವಣಗೆರೆ ಲೋಕಸಭೆ : ‘ಕೈ’ ಅಭ್ಯರ್ಥಿ ಹೆಚ್.ಬಿ. ಮಂಜಪ್ಪ ಗೆ ‘ಕಮ್ಯೂನಿಸ್ಟ್ ಪಕ್ಷ’ ಬೆಂಬಲ..!
ಸುದ್ದಿದಿನ, ದಾವಣಗೆರೆ : ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್ ಬಿ ಮಂಜಪ್ಪನವರಿಗೆ ಹಲವಾರು ಸಂಘ ಸಂಸ್ಥೆಗಳು, ಒಕ್ಕೂಟಗಳು ತಮ್ಮ ಬೆಂಬಲ ವ್ಯಕ್ತಪಡಿಸಿ ಮಂಜಪ್ಪನವರ ಕೈ ಬಲಪಡಿಸುತ್ತಿವೆ. ಇಂದು ಮುಂಜಾನೆ ಕಮ್ಯುನಿಸ್ಟ್ ಪಕ್ಷದ ಜಿಲ್ಲೆಯ ಹಿರಿಯ ಮುತ್ಸದಿ ಹೆಚ್ ಕೆ ರಾಮಚಂದ್ರಪ್ಪನವರು ಸಹ ತಮ್ಮ ಕಮ್ಯುನಿಸ್ಟ್ ಪಕ್ಷದ ಪೂರ್ಣ ಬೆಂಬಲವನ್ನು ಮಂಜಪ್ಪನವರಿಗೆ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರ ಎದುರು ಘೋಷಿಸಿದರು.
ಇದರೊಂದಿಗೆ ಒಬ್ಬ ಜನಸಾಮಾನ್ಯನ ಬೆನ್ನಿಗೆ ಇಂದಿಗೂ ಜನತೆ ನಿಲ್ಲುವರು ಎಂದು ಸಾಬೀತಾಗಿದೆ. ಈ ಬೆಳವಣಿಗೆಗಳಿಂದ ಬಿಜೆಪಿ ನಾಯಕರು ವಿಚಲಿತರಾಗಿ ಮಂಜಪ್ಪನವರ ಮೇಲೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಹಾಗು ಜೆಡಿಸ್ಸ್ ಪಕ್ಷದ ಕಾರ್ಯಕರ್ತರು, ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರ ಅಭಿಮಾನಿಗಳು, ಮಂಜಪ್ಪನವರ ಹಿತೈಷಿಗಳು ಒಟ್ಟಾಗಿ ನಿಂತು ಬಿಜೆಪಿಯ ದುರಹಂಕಾರವನ್ನು ಹಿಮ್ಮೆಟ್ಟಿಸಿ ಮಂಜಪ್ಪನವರಿಗೆ ವಿಜಯಮಾಲೆ ತೋಡಿಸೋಣ ಎಂದು ಕರೆ ನೀಡಿದ್ದಾರೆ.