ದಿನದ ಸುದ್ದಿ

ದಾವಣಗೆರೆ | ರೈತ ಚಳವಳಿ ಹೋರಾಟಗಾರ ಓಂಕಾರಣ್ಣ ಕೊರೊನಾದಿಂದ ಸಾವು

Published

on

ಸುದ್ದಿದಿನ:ದಾವಣಗೆರೆ: ಜಿಲ್ಲೆಯ ರೈತ ಚಳುವಳಿಯ ಹಿರಿಯ ಹೋರಾಟಗಾರರಾದ ವಾಸನದ ಓಂಕಾರಣ್ಣ ಕೊರೊನಾಗೆ ತುತ್ತಾಗಿದ್ದಾರೆ. ಇವರು ಗಟ್ಟಿ ಚಳುವಳಿಗಾರರಾಗಿದ್ದರು.

ದಾವಣಗೆರೆಯಲ್ಲಿ ಹಲವಾರು ರೈತ ಹೋರಾಟಗಳನ್ನು ರೂಪಿಸಿ ರೈತರಿಗೆ ನ್ಯಾಯ ಕೊಡಿಸಿದ್ದಾರೆ. ವಾಸನದ ಓಂಕಾರಣ್ಣ, ನಿಟುವಳ್ಳಿ ಕೆಂಗಣ್ಣ, ಮರಡಿ ನಾಗಣ್ಣ, ಶಂಭಣ್ಣ ರೈತ ಹೋರಾಟದ ದೊಡ್ಡ ಶಕ್ತಿಗಳು. 2010ಕ್ಕೆ ಹರಿಹರ ಮಾರ್ಗದಲ್ಲಿರುವ ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿದ್ದ ವೇಳೆ ಬೃಹತ್ ಹೋರಾಟ ನಡೆಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version