ದಿನದ ಸುದ್ದಿ
ದಾವಣಗೆರೆ | ಏ.30 ರಿಂದ ರೇಬೀಸ್ ಉಚಿತ ಲಸಿಕಾ ಸಪ್ತಾಹ
ಸುದ್ದಿದಿನ,ದಾವಣಗೆರೆ : ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೇಬೀಸ್ ರೋಗ ತಡೆಗಟ್ಟುವ ನಿಟ್ಟಿನಲ್ಲಿ ರೇಬೀಸ್ ಲಸಿಕ ಸರಬರಾಜಾಗಿದೆ. ಆದ್ದರಿಂದ ನಾಯಿ ಮತ್ತು ಬೆಕ್ಕುಗಳಿಗೆ ಏ.30 ರಿಂದ ಮೇ.06 ರವರೆಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಮಹಾನಗರ ಪಾಲಿಕೆ ದಾವಣಗೆರೆ ಇವರ ಸಹಯೋಗದೊಂದಿಗೆ ಉಚಿತ ಲಸಿಕಾ ಸಪ್ತಾಹವನ್ನು ಆಚರಿಸಲಾಗುತ್ತಿದೆ.
ಸಪ್ತಾಹದಲ್ಲಿ ನಾಯಿ ಮತ್ತು ಬೆಕ್ಕುಗಳಿಗೆ ಪಾಲಿಕ್ಲಿನಿಕ್, (ಜಿಲ್ಲಾ ಪಶು ಆಸ್ಪತ್ರೆ ) ದಾವಣಗೆರೆ, ಆರುಣಾ ಟಾಕೀಸ್ ಎದುರು ಬೆಳಿಗ್ಗೆ 9.30 ರಿಂದ 1.00 ಗಂಟೆ ಮತ್ತು ಮಧ್ಯಾಹ್ನ- 2.00 ರಿಂದ 4.00 ಗಂಟೆಯ ವರೆಗೆ ಉಚಿತವಾಗಿ ರೇಬೀಸ್ ಲಸಿಕೆ ಹಾಕಲಾಗುತ್ತಿದೆ. ಸಾರ್ವಜನಿಕರು ಲಸಿಕಾ ಸಪ್ತಾಹದಲ್ಲಿ ತಮ್ಮ ನಾಯಿ ಬೆಕ್ಕುಗಳಿಗೆ ಲಸಿಕೆ ಹಾಕಿಸಿ ರೇಬೀಸ್ ತಡೆಗಟ್ಟಲು ಸಹಕರಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243