ದಿನದ ಸುದ್ದಿ

ದಾವಣಗೆರೆ | ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಇಲ್ಲ : ಜಿಲ್ಲಾಧಿಕಾರಿ

Published

on

ಸುದ್ದಿದಿನ, ದಾವಣಗೆರೆ : ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಈಗಿರುವ ಮಾರ್ಗಸೂಚಿಗಳನ್ನೇ ಅತ್ಯಂತ ಕಠಿಣವಾಗಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ಸಿಸಿಸಿ ಆರೈಕೆ ಉತ್ತಮ

ತಾಲ್ಲೂಕುಗಳ ಗ್ರಾಮೀಣ ಭಾಗದಲ್ಲಿ ಜನರು ಹೋಂ ಐಸೋಲೇಷನ್ ನಿಯಮಗಳನ್ನು ಕಠಿಣವಾಗಿ ಪಾಲಿಸದೇ ಮನೆಯವರೆಲ್ಲಾ ಹಾಗೂ ಅಕ್ಕಪಕ್ಕದವರೆಲ್ಲ ಕೋವಿಡ್ ಪಾಸಿಟಿವ್ ಆಗುತ್ತಿದ್ದಾರೆ. ಆದ ಕಾರಣ ಪ್ರತ್ಯೇಕ ಶೌಚಾಲಯ ಕೊಠಡಿ ಇರುವವರು ಮಾತ್ರ ಹೋಂ ಐಸೋಲೇಷನ್ ಆಗಬೇಕು.

ಇದನ್ನೂ ಓದಿ | ಲಾಕ್‍ಡೌನ್ ಅವಧಿಯನ್ನು ಜ್ಞಾನಾರ್ಜನೆಗೆ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು 

ಇಲ್ಲವಾದಲ್ಲಿ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಉತ್ತಮ ಚಿಕಿತ್ಸೆ ಪಡೆಯಬೇಕು. ಸಿಸಿಸಿ ಗೆ ದಾಖಲಾಗದಿದ್ದರೆ ಪೊಲೀಸರ ಸಹಾಯದಿಂದ ಕರೆತರಲಾಗುವುದು. ಇದರಿಂದ ಇನ್ನು 8 ರಿಂದ 10 ದಿನಗಳಲ್ಲಿ ಕೋವಿಡ್ ಸರಪಳಿ ಕಡಿತಗೊಳಿಸುವ ಪ್ರಯತ್ನ ಮಾಡಬಹುದಾಗಿದ್ದು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಜಿ.ಪಂ.ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಕೋವಿಡ್ ಲಕ್ಷಣಗಳಿರುವ ಮತ್ತು ಕೋವಿಡ್ ಪರೀಕ್ಷೆಗೆ ನೀಡಿ ಫಲಿತಾಂಶಕ್ಕೆ ಕಾಯುತ್ತಿರುವ ಲಕ್ಷಣ ಹೊಂದಿದವರಿಗೆ ನೀಡಲು 8 ಔಷಧಿಗಳುಳ್ಳ 5 ಸಾವಿರ ಕಿಟ್‍ಗಳನ್ನು ಖರೀದಿಸಲಾಗುತ್ತಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version