ದಿನದ ಸುದ್ದಿ
ದಾವಣಗೆರೆ | ಎ.ವಿ.ಕೆ ಮಹಿಳಾ ಕಾಲೇಜಿನಲ್ಲಿ ನಾಳೆ ‘ ಹೊಸ ಶಿಕ್ಷಣ ನೀತಿ ಕಾರ್ಯಗಾರ’
ಸುದ್ದಿದಿನ,ದಾವಣಗೆರೆ : ದಾವಣಗೆರೆ ಅರ್ಥಶಾಸ್ತ್ರವೇದಿಕೆ ಮತ್ತು ಎ.ವಿ.ಕೆ ಮಹಿಳಾ ಕಾಲೇಜಿನ ಸಹಯೋಗದೊಂದಿಗೆ ಹೊಸ ಶಿಕ್ಷಣ ನೀತಿ (ಎನ್‍ಇಪಿ)ಕಾರ್ಯಗಾರವನ್ನು ಜೂನ್.14 ರಂದು ಎ.ವಿ.ಕೆ ಮಹಿಳಾ ಕಾಲೇಜಿನಲ್ಲಿ ಬೆಳಿಗ್ಗೆ 11.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಬಿ.ಪಿ ಕುಮಾರ್ ವಹಿಸಲಿದ್ದಾರೆ, ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ. ಸಿ ಹೆಚ್. ಮುರಿಗೇಂದ್ರಪ್ಪ ನಡೆಸಿಕೊಡಲಿದ್ದಾರೆ. ಮುಖ್ಯಅತಿಥಿಗಳಾಗಿ ಪ್ರೊ. ಸುಚಿತ್ರ, ಪ್ರೊ. ಭೀಮಣ್ಣ ಸುಣಗಾರ, ಪ್ರೊ. ಷಣ್ಮುಖ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ.. ಕೆ. ಬಿ ರಂಗಪ್ಪ, ಪ್ರೊ. ಹುಚ್ಚೇಗೌಡ ಹಾಗೂ ಕಾರ್ಯಕ್ರಮದಲ್ಲಿ ಪ್ರೊ. ಬೋರಯ್ಯ, ಪ್ರೊ. ಪ್ರವೀಣ್ ಕುಮಾರ್, ಪ್ರೊ. ಮಂಜಣ್ಣ, ಪ್ರೊ.ಕಾಡಜ್ಜಿ ಶಿವಪ್ಪ, ಪ್ರೊ. ಶಾಂತಕುಮಾರಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243