ದಿನದ ಸುದ್ದಿ
ವಿನೋಬ ನಗರ ಗಣಪತಿ ಮೂರ್ತಿಯ ಅದ್ದೂರಿ ಶೋಭಾಯಾತ್ರೆ; ಮೆರವಣಿಗೆ ಸೇರಿತು ಜನಸಾಗರ
ಸುದ್ದಿದಿನ ದಾವಣಗೆರೆ: ವಿನೋಬ ನಗರದಲ್ಲಿ ಶ್ರೀ ವೀರ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪ್ರತಿಷ್ಠಾನ ಮಾಡಿದ್ದ ಗಣಪತಿ ಮೂರ್ತಿಯ ಶೋಭಾಯಾತ್ರೆ ಅದ್ದೂರಿಯಾಗಿ ನೆರವೇರಿತು. ಶೋಭಾಯಾತ್ರೆಯಲ್ಲಿ ಜನಸಾಗರವೇ ಸೇರಿತ್ತು. ಗಣಪತಿ ಮೆರವಣಿಗೆ ಸಾಗಿದ ಮಾರ್ಗದಲ್ಲಿ ಯುವಸಮೂಹ ಡಿಜೆ ಸದ್ದಿಗೆ ಹೆಜೆ ಹಾಕಿದರು. ಡೊಳ್ಳು ಕುಣಿತ, ನಂದಿಕೋಲು, ವೀರಗಾಸೆ, ಹಲಗೆ, ಜಾಜ್ ಸೇರಿದಂತೆ ವಾದ್ಯಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.
ಗಣಪತಿ ಮೆರವಣಿಗೆಯ ಟ್ರ್ಯಾಕ್ಟರ್ ನ್ನು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಚಲಾಯಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಸಾಥ್ ನೀಡಿದರು. ಯುವಕರು ಭಗವಾ ಧ್ವಜ ಹಾರಿಸಿ ಮೂಲಕ ಗಮನ ಸೆಳೆದರು. ಗಣೇಶ ಮೂರ್ತಿಯ ಶೋಭಾಯಾತ್ರೆಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಮೆರವಣಿಗೆಯಲ್ಲಿ ಗಜರಾಜ ಹೆಜ್ಜೆ ಹಾಕಿತು. ಮಾರ್ಗದುದ್ದಕ್ಕೂ ಜನರು ಗಣಪತಿ ಮೂರ್ತಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಭಕ್ತಿ ಸಲ್ಲಿಸಿದರು.
ದಾವಣಗೆರೆಯಲ್ಲಿ ಹಿಂದೂ ಯುವಶಕ್ತಿ ಸಂಘಟನೆ ಪ್ರತಿಷ್ಠಾಪಿಸಿರುವ 13 ಸಾವಿರ ಶಿವಲಿಂಗಗಳಿಂದ ನಿರ್ಮಿಸಿದ ಗಣೇಶ ಮಂಟಪಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳ ಭೇಟಿ ನೀಡಿದರು.