ದಿನದ ಸುದ್ದಿ
ದಾವಣಗೆರೆ | ಚಿಕನ್ ಸಾಂಬಾರ್ ಮಾಡಿಲ್ಲ ಅಂತ ಪತ್ನಿ ಕೊಂದ ಪತಿ
ಸುದ್ದಿದಿನ,ದಾವಣಗೆರೆ : ಚಿಕನ್ ಸಾಂಬಾರ್ ಮಾಡಿಲ್ಲ ಎಂದು ಗಂಡ, ಹೆಂಡತಿಯನ್ನ ಚಾಕುವಿನಿಂದ ಮನಸೋ ಇಚ್ಛೆ ಇರಿದು ಕೊಲೆಗೈದಿರುವ ಘಟನೆ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಕುಡಿದು ಬಂದಿದ್ದ ಕೆಂಚಪ್ಪ, ಚಿಕನ್ ತಂದು ಸಾಂಬಾರ್ ಮಾಡಿಕೊಡುವಂತೆ ಗಲಾಟೆ ಮಾಡಿ
ಹೆಂಡತಿ ಶೀಲಾ (29) ರನ್ನು ಕೊಲೆ ಮಾಡಿದ್ದಾನೆ. 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಈ ದಂಪತಿಗಳು.
ಕೊಲೆ ಮಾಡಿ ರಾತ್ರಿ ಚಾಕು ಹಿಡಿದು ಸೀದಾ ಪೊಲೀಸ್ ಸ್ಟೇಷನ್ ಗೆ ಹೋಗಿದ್ದ ಕೆಂಚಪ್ಪ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243